ಪ್ರಮೀತ್ ರಾಜ್ ಕಟ್ಟತ್ತಾರು ರಚಿಸಿದ ಹಾಗೂ ಮನಮೋಹನ ಕಣಿಯಾರು ನಿರ್ಮಾಣದ ಪುತ್ತೂರು ತಾಲೂಕಿನ ಪ್ರಸಿದ್ಧ ಹಾಗೂ ಪುರಾತನ ದೇವಲಯವಾದ ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರೀ ದೇವಸ್ಥಾನ ಶ್ರೀ ಕ್ಷೇತ್ರ ಕೆಯ್ಯೂರಿನ ಕುರಿತಾದ ”ಕೆಯ್ಯೂರುದಪ್ಪೆನ ಐಸಿರದ ಐತ” ಎಂಬ ಮೊತ್ತ ಮೊದಲ ಭಕ್ತಿ ಪ್ರಧಾನ ವಿಡಿಯೋ ಆಲ್ಬಮ್ ಹಾಡು ದಿನಾಂಕ 30.05.2025 ಶುಕ್ರವಾರ ಶ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಆಲ್ಬಮ್ ಹಾಡನ್ನು ಶ್ರೀ ಕ್ಷೇತ್ರ ಕೆಯ್ಯೂರಿನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಎಕೆ ಜಯರಾಮ ರೈ ಕೆಯ್ಯೂರು ಇವರು ಬಿಡುಗಡೆಗೊಳಿಸಿದರು ಮತ್ತು ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಹಾಗೂ ಕ್ಷೇತ್ರೇಶರಾದ ಶ್ರೀ ಶಶಿಧರ ರಾವ್ ಬೊಲಿಕ್ಕಳ ಯೌಟ್ಯೂಬ್ ನಲ್ಲಿ ಅಧಿಕೃತವಾಗಿ ವಿಡಿಯೋ ಗೆ ಚಾಲನೆಗೊಳಿಸಿದರು.
ಕೆಯ್ಯೂರುದಪ್ಪೆನ ಐಸಿರದ ಐತ ವಿಡಿಯೋ ಆಲ್ಬಮ್ ಹಾಡಿಗೆ ಪ್ರಮೀತ್ ರಾಜ್ ಕಟ್ಟತ್ತಾರು ಸಾಹಿತ್ಯ ಬರೆದು ನಿರ್ದೇಶನವನ್ನು ಮಾಡುವುದರ ಜೊತೆಗೆ ಅಭಿನಯವನ್ನು ಸಹ ಮಾಡಿದ್ದಾರೆ. ಅಶ್ವಿನ್ ಬಾಬಣ್ಣ ಇವರು ಈ ಭಕ್ತಿಗೀತೆಗೆ ಸಂಗೀತ ನೀಡಿದ್ದು, ಪ್ರವೀಣ್ ಕುಮಾರ್ ಮಂಗಳೂರು ಮತ್ತು ಸವಿತಾ ಅವಿನಾಶ್ ಇವರ ಕಂಠದಲ್ಲಿ ಸುಮಧುರವಾಗಿ ಮೂಡಿ ಬಂದಿದೆ. ತುಳು ಚಿತ್ರರಂಗದ ಹೆಸರಾಂತ ಮತ್ತು ಬಹಳ ಬೇಡಿಕೆಯ ಛಾಯಾಗ್ರಾಹಕ ಅರುಣ್ ರೈ ಪುತ್ತೂರು ಕೆಯ್ಯೂರುದಪ್ಪೆನ ಐಸಿರದ ಐತ ಆಲ್ಬಮ್ ಹಾಡಿಗೆ ಛಾಯಾಗ್ರಹಣ ಮಾಡಿದ್ದಾರೆ. ಸಂಕಲನದಲ್ಲಿ ಕೈಚಳಕ ತೋರಿಸಿ ಸೈ ಎನಿಸಿಕೊಂಡವರು ರೋಷನ್ ಎ.ಎಸ್ ಕಡಬ. ಉಳಿದಂತೆ ತಂಡದಲ್ಲಿ ವಿಶ್ಮಿತಾ ರೈ, ಗಣೇಶ್, ಅನಿಲ್ ರೈ ಸೌಮ್ಯ ಅನಿರುದ್ದ್, ಸತೀಶ್, ಅಶೋಕ್ ಬಾಳಿಲ ಇದ್ದಾರೆ.
ಕೆಯ್ಯೂರುದಪ್ಪೆನ ಐಸಿರದ ಐತ ಬಿಡುಗಡೆ ಸಂಧರ್ಭದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀನಿವಾಸ ರಾವ್, ಸಹ ಅರ್ಚಕರಾದ ಮಧುಸೂಧನ್ ಭಟ್, ಆನಂದ ರೈ ಕೆಯ್ಯೂರು, ಭಾಗ್ಯೇಶ್ ರೈ ಕೆಯ್ಯೂರು, ಗಣೇಶ್ ಭಟ್ ಕೈತಡ್ಕ, ಚಂದ್ರಶೇಖರ ರೈ ಕಜೆ, ವಿಶ್ವನಾಥ್ ಪೂಜಾರಿ ಕೆಂಗುಡೇಲು, ಹೊನ್ನಪ್ಪ ಮೂಲ್ಯ ಕಟ್ಟತ್ತಾರು, ಸುಜಯ ಕೆಯ್ಯೂರು, ಪದ್ಮನಾಭ ಪಲ್ಲತ್ತಡ್ಕ, ಅಶ್ವಥ್ ಭಟ್ ದೇರ್ಲ, ದೇವಪ್ಪ, ಮೋನಪ್ಪ ಅಜಲಾಯ ಕೆಯ್ಯೂರು, ಚಿನ್ನಪ್ಪ ಕೆಯ್ಯೂರು, ಮತ್ತು ಕ್ಷೇತ್ರದ ಭಕ್ತಾದಿಗಣ್ಯರು ಉಪಸ್ಥಿತರಿದ್ದು, ಹಾಡನ್ನು ನೋಡಿ ಹರಸಿದರು.
ಸದ್ಯ ಹಾಡು ಯುಟ್ಯೂಬ್ ನಲ್ಲಿ ಲಭ್ಯವಿದ್ದು Pramith Raj Creations ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ಎಲ್ಲರೂ ಯುಟ್ಯೂಬ್ ನಲ್ಲಿ ಕೆಯ್ಯೂರುದಪ್ಪೆನ ಐಸಿರದ ಐತ ಆಲ್ಬಮ್ ಹಾಡನ್ನು ನೋಡಲು ಅವಕಾಶವಿದೆ. ಈ ಹಾಡಿನಲ್ಲಿ ಕ್ಷೇತ್ರದ ಸಂಪೂರ್ಣ ಚಿತ್ರಣವನ್ನು ಮತ್ತು ಪ್ರಕೃತಿ ಸೌಂದರ್ಯವನ್ನು ಬಹಳ ಸುಂದರವಾಗಿ ಅರುಣ್ ಅವರು ತನ್ನ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿದಿದ್ದು ಪ್ರಮೀತ್ ರಾಜ್ ಅವರ ಸಾಹಿತ್ಯದ ಜೊತೆಗೆ ಪ್ರವೀಣ್ ಹಾಗೂ ಸವಿತಾ ಅವರ ಹಾಡುಗಾರಿಕೆ ಜನರನ್ನು ಮಂತ್ರಮುಗ್ಧರನ್ನಾಗಿಸಿದೆ. ಅಶ್ವಿನ್ ಅವರ ಸಂಗೀತ, ಹಾಡನ್ನು ಪದೇ ಪದೇ ಗುಣುಗುಣಿಸುವ ಹಾಗೆ ಮಾಡಿದೆ. ರೋಷನ್ ಅವರು ಸಂಕಲನದಲ್ಲಿ ಮಾಡಿದ ಕೈಚಳಕ ಯಾವ ಪ್ರೊಫೆಶನಲ್ ಸಿನಿಮಾಗಳಿಗೂ ಕಡಿಮೆ ಇಲ್ಲದಂತೆ ಆಲ್ಬಮ್ ಹಾಡು ಮೂಡಿ ಬಂದಿದೆ.
ಬಲೂಚಿಸ್ತಾನ(Balochistan) ಪಾಕಿಸ್ತಾನ ಸ್ಪರ್ಶಿಸದ ಗಡಿಭೂಮಿ: ಸಂಪೂರ್ಣ ಮಾಹಿತಿ ಇಲ್ಲಿದೆ(2025)
About Balochistan: ಭಾರತ ಪಾಕಿಸ್ತಾನ ಉದ್ವಿಗ್ನತೆಯ ಮಧ್ಯೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮಧ್ಯೆ ಇರುವ ಹೆಚ್ಚಾಗಿ ಹಿಂದೂ ದೇವಾಲಯಗಳನ್ನು ಹೊಂದಿರುವ ಪ್ರದೇಶ Balochistan. ಸುಮಾರು ವರ್ಷಗಳಿಂದ ಸ್ವಂತ ರಾಷ್ಟ್ರವಾಗಿ ಘೋಷಣೆ ಮಾಡ್ಬೇಕೆಂದು ಹೋರಾಡುತ್ತಿದೆ. ಸದ್ಯ ಪಾಕಿಸ್ತಾನ ಮತ್ತು ಭಾರತ ಉದ್ವಿಗ್ನತೆಯ ಪ್ರಯೋಜನ ಪಡೆದುಕೊಂಡು ಪಾಕಿಸ್ತಾನದ ಮೇಲೆ ತಾನು ದಾಳಿ ಮುಂದುವರಿಸಿ ಸ್ವತಂತ್ರ ರಾಷ್ಟ್ರವನ್ನಾಗಿ ಘೋಷಿಸಲು ಮುಂದಾಗಿದೆ. ಈಗ ಜನರಿಗಿರುವ ಕುತೂಹಲ ಏನೆಂದರೆ Balochistan ಬಗ್ಗೆ ತಿಳ್ಕೊಳ್ಳುವಂತಹದ್ದು.
ಸಂಸ್ಕೃತಿ, ಆರ್ಥಿಕತೆ, ಇತಿಹಾಸ ಮತ್ತು ಪ್ರವಾಸೋದ್ಯಮ ತಾಣ ಬಲುಚಿಸ್ತಾನ. ಪಾಕಿಸ್ತಾನದ ಅತ್ಯಂತ ದೊಡ್ಡ ಪ್ರಾಂತ್ಯವಾದ ಬಲೂಚಿಸ್ತಾನದ ಕುರಿತು ನಿಮಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಸಿಗಲಿದೆ. ಅದರ ಇತಿಹಾಸ, ಸಂಸ್ಕೃತಿ, ನೈಸರ್ಗಿಕ ಸೌಂದರ್ಯ, ಆರ್ಥಿಕ ಸಂಪತ್ತು ಮತ್ತು ಅಭಿವೃದ್ಧಿಯ ಸಾಧ್ಯತೆಗಳ ಬಗ್ಗೆ ತಿಳಿಯೋಣ.
ಬಲೂಚಿಸ್ತಾನ(Balochistan Introduction) ಬಗ್ಗೆ ಪರಿಚಯ
ಪಾಕಿಸ್ತಾನದ ನಕ್ಷೆಯಲ್ಲಿಯೇ ಅತಿದೊಡ್ಡ ಪ್ರದೇಶವಿರುವ ಬಲೂಚಿಸ್ತಾನ ಒಂದು ಮರೆಯವಲ್ಪಟ್ಟ, ಆದರೆ ಅಪಾರ ಅವಕಾಶಗಳಿಂದ ತುಂಬಿದ ಭೂಭಾಗವಾಗಿದೆ. ದೇಶದ 44% ಭೂಭಾಗವನ್ನು ಹೊಂದಿರುವ ಈ ಪ್ರದೇಶದಲ್ಲಿ ನದಿಗಳು, ಪರ್ವತಗಳು, ಮರಳು ಭೂಮಿಗಳು ಮತ್ತು ಅಡಗಿದ ಕಣಿವೆಗಳು ಇವೆ. ಭೂಮಿಯಡಿಯಲ್ಲಿ ಅಪಾರ ಸಂಪತ್ತು, ನದೀಪ್ರವಾಹಗಳು ಮತ್ತು ಸಮುದ್ರ ತೀರವಿರುವ ಬಲೂಚಿಸ್ತಾನ, ಇತಿಹಾಸ, ಸಂಸ್ಕೃತಿ ಮತ್ತು ಆರ್ಥಿಕತೆಯ ಸಂಗಮವಾಗಿದೆ.
ಬಲೂಚಿಸ್ತಾನದ(Balochistan) ಭೌಗೋಳಿಕ ಸ್ಥಿತಿ
ಬಲೂಚಿಸ್ತಾನ ಪಾಕಿಸ್ತಾನದ ನೈಋತ್ಯ ಭಾಗದಲ್ಲಿದೆ. ಇದು ಪಶ್ಚಿಮದಲ್ಲಿ ಇರಾನ್, ಉತ್ತರದಲ್ಲಿ ಅಫ್ಘಾನಿಸ್ತಾನ ಮತ್ತು ದೇಶೀಯವಾಗಿ ಸಿಂಧ್, ಪಂಜಾಬ್ ಮತ್ತು ಖೈಬರ್ ಪಖ್ತೂನ್ಖ್ವಾ ಪ್ರಾಂತ್ಯಗಳಿಗೆ ಸೀಮಿತವಾಗಿದೆ. ದಕ್ಷಿಣದಲ್ಲಿ ಅರೇಬಿಯನ್ ಸಮುದ್ರಕ್ಕೆ ತೀರ ಹೊಂದಿದೆ.
ಬಲೂಚಿಸ್ತಾನದ ಬಗ್ಗೆ ತ್ವರಿತ ಮಾಹಿತಿ:
ಬಲೂಚಿಸ್ತಾನದ ರಾಜಧಾನಿ: ಕ್ವೆಟ್ಟಾ
ಪ್ರದೇಶ ವಿಸ್ತೀರ್ಣ: ಸುಮಾರು 3,47,190 ಚ.ಕಿ.ಮೀ
ಬಲೂಚಿಸ್ತಾನದ ಜನಸಂಖ್ಯೆ: ಸುಮಾರು 12.34 ಮಿಲಿಯನ್ (2023 ಅಂದಾಜು)
ಪ್ರಮುಖ ನಗರಗಳು: ಕ್ವೆಟ್ಟಾ, ಗ್ವಾದರ್, ಖುಜ್ದಾರ್, ತುರ್ಬತ್
ವಿಶೇಷವಾಗಿ ಕ್ವೆಟ್ಟಾ, ಗ್ವಾದರ್, ಖುಜ್ದಾರ್, ತುರ್ಬತ್ ನಗರಗಳ ಪ್ರದೇಶವು ಪರ್ವತಮಾಲೆಗಳು, ಮರಳುಭೂಮಿಗಳು ಮತ್ತು ದೀರ್ಘ ಸಮುದ್ರತೀರವನ್ನು ಹೊಂದಿದೆ.
ಬಲೂಚಿಸ್ತಾನದ ಇತಿಹಾಸ
ಬಲೂಚಿಸ್ತಾನದ ಇತಿಹಾಸವು ಸಾವಿರಾರು ವರ್ಷ ಹಿಂದಕ್ಕೆ ಹೋಗುತ್ತದೆ. ಇಲ್ಲಿ ಕಂಡು ಬರುವ ಮೇಹರ್ಗಢ್ ಎಂಬ ನವ ಪಾಷಾಣ ಕಾಲದ ನಾಗರಿಕತೆ (ಕ್ರಿ.ಪೂ. 7000) ದಕ್ಷಿಣ ಏಷ್ಯಾದ ಅತ್ಯಂತ ಪ್ರಾಚೀನ ಕೃಷಿ ನಾಗರಿಕತೆಗಳಲ್ಲಿ ಒಂದು. ಇದನ್ನು ಹಲವಾರು ಸಾಮ್ರಾಜ್ಯಗಳು ಅಂದರೆ ಪರ್ಷಿಯನ್, ಗ್ರೀಕ್, ಮೌರ್ಯ, ಮುಸ್ಲಿಂ ಸಾಮ್ರಾಜ್ಯಗಳು ಮತ್ತು ನಂತರ ಬ್ರಿಟಿಷ್ ವಸಾಹತು ಆಡಳಿತಗಳು ಆಳ್ವಿಕೆ ಮಾಡಿದ್ದವು. 1947ರ ಭಾರತದ ಸ್ವಾತಂತ್ರ್ಯಾ ನಂತರ 1948ರಲ್ಲಿ ಬಲೂಚಿಸ್ತಾನ ಪಾಕಿಸ್ತಾನದಲ್ಲಿ ಸೇರ್ಪಡೆಯಾಯಿತು.
ಬಲೂಚಿಸ್ತಾನದ ಜನತೆ ಮತ್ತು ಸಂಸ್ಕೃತಿ
ಬಲೂಚಿಸ್ತಾನ ಬಹುಭಾಷಾ ಮತ್ತು ಬಹುಜನಾಂಗದ ಪ್ರದೇಶವಾಗಿದೆ. ಜಗತ್ತಿನ ಏಳು ಶಕ್ತಿಪೀಠಗಳಲ್ಲಿ ಬಲೂಚಿಸ್ತಾನದಲ್ಲಿರುವ ಶ್ರೀ ಹಿಂಗ್ಲಾಜ್ ಮಾತಾ ಮಂದಿರಾ (Shaktipeeth Shri Hinglaj Mata Mandir) ಸಹ ಒಂದಾಗಿದೆ ಎಂಬ ನಂಬಿಕೆ ಇದೆ.
ಬಲೂಚಿಸ್ತಾನದ ಪ್ರಮುಖ ಜನಾಂಗಗಳು:
ಬಲೋಚ್
ಪಷ್ತುನ್
ಬ್ರಾಹುಯಿ
ಹಜಾರಾ (ಅಲ್ಪಸಂಖ್ಯಾತ)
ಬಲೂಚಿಸ್ತಾನದಲ್ಲಿ ಮಾತಾಡುವ ಭಾಷೆಗಳು:
ಬಲೂಚಿ
ಪಶ್ತು
ಬ್ರಾಹುಯಿ
ಉರ್ದು
ಬಲೂಚಿಸ್ತಾನದ ಸಾಂಸ್ಕೃತಿಕ ವೈಶಿಷ್ಟ್ಯಗಳು
ಬಲುಚಿ ಸಂಸ್ಕೃತಿಯು ಗೌರವ, ಅತಿಥಿ ಸತ್ಕಾರ, ಮತ್ತು ಜಾತಿ ಸಂಸ್ಕೃತಿಗೆ ಆದ್ಯತೆ ನೀಡುತ್ತದೆ. ಅವರ ಸಂಗೀತ, ಕವನಗಳು ಮತ್ತು ಕತೆಗಳ ಮೂಲಕ ಸಂಸ್ಕೃತಿ ಜೀವಂತವಾಗಿರುತ್ತದೆ. ಸಿಬಿ ಮೇಳ ಮತ್ತು ಇದ್ ಹಬ್ಬಗಳು ಪ್ರಮುಖ ಆಚರಣೆಗಳಾಗಿವೆ.
ಬಲೂಚಿಸ್ತಾನದ ಆರ್ಥಿಕ ಸ್ಥಿತಿ ಹೇಗಿದೆ?
ಆರ್ಥಿಕವಾಗಿ ಬಲೂಚಿಸ್ತಾನ ಅಭಿವೃದ್ಧಿಯಿಂದ ಹಿಂದೆ ಇದ್ದರೂ ಸಹ, ಬಲೂಚಿಸ್ತಾನದಲ್ಲಿ ಅಪಾರ ಖನಿಜ ಸಂಪತ್ತುಗಳು ಇವೆ. ಹೀಗಾಗಿ ಬಲೂಚಿಸ್ತಾನವನ್ನು ವಶಪಡಿಸಲು ಪಾಕಿಸ್ತಾನ ಮತ್ತು ಚೀನಾ ಹಲವು ವರ್ಷಗಳಿಂದ ಇನ್ನಿಲ್ಲದ ಪ್ರಯತ್ನ ಪಡುತ್ತಿದೆ. ಕಲ್ಲಿದ್ದಲು, ತಾಮ್ರ, ಚಿನ್ನ, ಮತ್ತು ನೈಸರ್ಗಿಕ ಅನಿಲ ಈ ಮಣ್ಣಿನಲ್ಲಿ ಹೇರಳವಾಗಿರುವುದು ಕಂಡುಬಂದಿದೆ. ಖನಿಜ ಸಂಪತ್ತುಗಳು ಮತ್ತು ಘಟಕಗಳು ಬಲೂಚಿಸ್ತಾನದ ಬಹು ಮುಖ್ಯವಾದ ಆರ್ಥಿಕ ಮೂಲಗಳಾಗಿವೆ.
ಬಲೂಚಿಸ್ತಾನದ ಗ್ವಾದರ್ ಬಂದರು:
ಅರೇಬಿಯನ್ ಸಮುದ್ರದ ದಡದಲ್ಲಿ ಇರುವ ಈ ಬಂದರು, ಚೀನಾ-ಪಾಕಿಸ್ತಾನ ಆರ್ಥಿಕ ಮಾರ್ಗ (CPEC) ಯೋಜನೆಯ ಅಡಿ ಅಭಿವೃದ್ಧಿಯಾಗುತ್ತಿದೆ. ಗ್ವಾದರ್ ಬಂದರು ಬಲೂಚಿಸ್ತಾನದ ಬಹುದೊಡ್ಡ ಬಂದರಾಗಿದೆ. ಇದು ಪಾಕಿಸ್ತಾನ ಮತ್ತು ಬಲೂಚಿಸ್ತಾನಕ್ಕೆ ಒಳಪಟ್ಟಿದೆ. ಈ ಬಂದರನ್ನು China Overseas Port Holding Company ನಿರ್ವಹಿಸುತ್ತಿದೆ. ಗ್ವಾದರ್ ಬಂದರು ಮಧ್ಯ ಏಷ್ಯಾ ಮತ್ತು ಮಧ್ಯಪ್ರಾಚ್ಯ ವ್ಯಾಪಾರಕ್ಕೆ ಒಂದು ಪ್ರಮುಖ ಪ್ರವೇಶ ದ್ವಾರವಾಗಿದೆ, ಮತ್ತು ಪಾಕಿಸ್ತಾನದ ಕರಾಚಿ ಮತ್ತು ಖಾಸಿಮ್ ಬಂದರಿನ ಮೇಲೆ ಪಾಕಿಸ್ತಾನದ ಅವಲಂಬನೆಯನ್ನು ಕಡಿಮೆ ಮಾಡುವ ಒಂದು ಮಾರ್ಗವಾಗಿದೆ.
ಬಲೂಚಿಸ್ತಾನದ ಕೃಷಿ ಮತ್ತು ಪಶುಪಾಲನೆ:
ಬಲೂಚಿಸ್ತಾನದಲ್ಲಿ ಮಳೆ ಬಹಳ ಕಡಿಮೆ ಇರುವ ಕಾರಣ ಕೃಷಿಯ ವ್ಯಾಪ್ತಿ ಕಡಿಮೆ. ಹೆಚ್ಚು ಮಳೆಯನ್ನೂ ಅವಲಂಬಿಸಿರುವ ಕೃಷಿ ಇಲ್ಲ. ಕಾಲೋಚಿತಕ್ಕೆ ಅನುಗುಣವಾಗುವಂತಹ ಕೆಲವು ಹಣ್ಣುಗಳ ತೋಟವನ್ನು ನೀವು ಬಲೂಚಿಸ್ತಾನದಲ್ಲಿ ಕಾಣಬಹದು. ಉದಾರಣೆಗೆ ದ್ರಾಕ್ಷಿ, ಸೇಬು, ದಾಳಿಂಬೆಯ ಬೆಳೆಗಳಿಗೆ ಹೆಚ್ಚು ನೀರಿನ ಅಗತ್ಯತೆ ಇಲ್ಲದಿರುವುದರಿಂದ ಇಂತಹ ತೋಟಗಳು ಹೆಚ್ಚಾಗಿ ಕಾಣಬಹುದು.
ಮೀನುಗಾರಿಕೆ:
ಬಲೂಚಿಸ್ತಾನದಲ್ಲಿ ಅರಬ್ಬೀ ಸಮುದ್ರ ತೀರಾ ಇರುವುದರಿಂದ ಮೀನುಗಾರಿಕೆ ಹೆಚ್ಚಾಗಿ ಕಾಣಬಹುದು. ಇಲ್ಲಿಯ ಕರಾವಳಿ ಪ್ರದೇಶದ ಜನತೆಗೆ ಮೀನುಗಾರಿಕೆಯೇ ಮುಖ್ಯ ಆರ್ಥಿಕ ಮೂಲವಾಗಿದೆ.
ಬಲೂಚಿಸ್ತಾನದ ಪ್ರವಾಸೋದ್ಯಮ
ಬಲೂಚಿಸ್ತಾನ ಪ್ರವಾಸಿಗರಿಗೆ ವಿಶೇಷ ಆಕರ್ಷಣೆಯ ತಾಣವಾಗಿದೆ. ಇಲ್ಲಿ ಸಾಕಷ್ಟು ಗೊತ್ತಿಲ್ಲದ ಮತ್ತು ಇನ್ನೂ ಗುರಿತಿಸಲ್ಪಡದ ಪ್ರೇಕ್ಷಣೀಯ ಸ್ಥಳಗಳು ಇವೆ. ಸ್ಥಿರ ಆಡಳಿತ ಇಲ್ಲದಿರುವುದರಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒಟ್ಟು ಇನ್ನಷ್ಟೇ ಸಿಗಬೇಕಷ್ಟೆ. ಬಲೂಚಿಸ್ಥಾನದ ಪ್ರವೋಸೋದ್ಯಮಕ್ಕೆ ಸಾಕಷ್ಟು ಮನ್ನಣೆ ಸಿಕ್ಕರೆ ಇನ್ನಷ್ಟು ಅಭಿವೃದ್ಧಿ ಗೊಳ್ಳಬಹದು ಎಂದು ನಂಬಲಾಗಿದೆ. ವಿಶೇಷವಾಗಿ ಪರ್ವತ ಶ್ರೇಣಿಗಳು, ಗಾಳಿ ಫ್ಯಾನ್ ಗಳು ಮತ್ತು ಪ್ರಾಚೀನ ದೇವಾಲಯಗಳು ಇಲ್ಲಿ ಪ್ರವಾಸೋದ್ಯಮದ ಆಕರ್ಷಣೆಯಾಗಿದೆ.
ಬಲೂಚಿಸ್ತಾನದ ಪ್ರಮುಖ ಪ್ರವಾಸಿ ಸ್ಥಳಗಳು:
ಹಿಂಗೋಲ್ ರಾಷ್ಟ್ರೀಯ ಉದ್ಯಾನವನ – ಹಸಿರು ಮರಗಳು, ಪ್ರಾಣಿಗಳು ಮತ್ತು
ಪ್ರಸಿದ್ಧ ಹಿಂಗ್ಲಾಜ್ ದೇವಾಲಯ ಶಕ್ತಿಪೀಠ
ಕುಂಡ್ ಮಲಿರ್ ಕಡಲತೀರ
ಝಿಯಾರತ್ – ಪ್ರಸಿದ್ಧ ಜುನಿಪರ್ ಅರಣ್ಯಗಳು ಮತ್ತು ಕ್ವೈದೆಆಜಮ್ ವಾಸಸ್ಥಾನ
ಪೀರ್ ಘೈಬ್ ಜಲಪಾತ – ಬೋಲಾನ್ ಬಳಿಯ ಪ್ರಕೃತಿ ತಾಣ
ಅಸ್ತೋಲಾ ದ್ವೀಪ – ಪಾಕಿಸ್ತಾನದ ಏಕೈಕ ದ್ವೀಪ
ಬಲೂಚಿಸ್ತಾನ ಎದುರಿಸುತ್ತಿರುವ ಸಮಸ್ಯೆಗಳು
ಬಲೂಚಿಸ್ತಾನ ಸುಮಾರು ವರ್ಷಗಳಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಅವುಗಳಲ್ಲಿ ಪ್ರಮುಖವಾದ ಸಮಸ್ಯೆಗಳು ಈ ಕೆಳಗಿನಂತಿವೆ.
ಶಿಕ್ಷಣದ ಕೊರತೆ
ಆರೋಗ್ಯ ಸೇವೆಗಳ ಕೊರತೆ
ದಾರಿ-ವಿದ್ಯುತ್ ನ ಕೊರತೆ
ಮೂಲ ಸೌಕರ್ಯದ ಕೊರತೆ
ನಿರುದ್ಯೋಗ ಮತ್ತು ಬಡತನದ ಸಮಸ್ಯೆ
ರಾಜಕೀಯ ಅಸ್ಥಿರತೆ ಮತ್ತು ಸ್ವಾಯತ್ತತೆಗೆ ಆಗುವ ಒತ್ತಾಯಗಳು
ಪಾಕಿಸ್ತಾನದ ಒತ್ತಡ
ಭಯೋತ್ಪಾದನಾ ಸಮಸ್ಯೆ
ಆರ್ಥಿಕ ಸಮಸ್ಯೆ
ಬಲೂಚಿಸ್ತಾನದ ಬೆಳವಣಿಗೆ ಮತ್ತು ಭವಿಷ್ಯ
ಬಲೂಚಿಸ್ತಾನದಲ್ಲಿ ಇತ್ತೀಚೆಗೆ ಹಲವಾರು ಯೋಜನೆಗಳು ಪ್ರಾರಂಭಗೊಂಡಿವೆ:
CPEC ಮತ್ತು ಗ್ವಾದರ್ ಫ್ರೀ ಜೋನ್
ರಸ್ತೆ ಮತ್ತು ಬಂದರು ಮೂಲಸೌಕರ್ಯ ಅಭಿವೃದ್ಧಿ
ಆರ್ಥಿಕ ವಲಯಗಳು (SEZs)
ಸೌರ ಮತ್ತು ಗಾಳಿ ಶಕ್ತಿ ಯೋಜನೆಗಳು
ಕೊನೆಯ ಮಾತು
ಬಲೂಚಿಸ್ತಾನ ಒಂದು ರೀತಿಯ ವಿಶೇಷವಾದ ರಾಷ್ಟ್ರವಾಗಿದೆ. ಬಲೂಚಿಸ್ತಾನ ಇತಿಹಾಸ, ಸಂಪತ್ತು, ಸಂಸ್ಕೃತಿ ಮತ್ತು ಅವಕಾಶಗಳ ಸಂಗಮ. ಇದನ್ನು ಸರಿಯಾಗಿ ಅಭಿವೃದ್ಧಿಪಡಿಸಿದರೆ, ಇದು ಕೇವಲ ಪಾಕಿಸ್ತಾನವಲ್ಲದೇ ಸಂಪೂರ್ಣ ದಕ್ಷಿಣ ಏಷ್ಯಾ ಪ್ರದೇಶಕ್ಕೆ ಸಹ ಆರ್ಥಿಕ ಚಲನೆ ನೀಡಬಹುದಾದ ತಾಣವಾಗಬಹುದು.
FAQ
Q: What is the full form of BLA?
A: Balochistan Liberal Army
Q: Is Balochistan a separate company or belongs to Pakistan?
A: Balochistan is ruling through BLA. It’s not a part of Pakistan
Q: What is the national language of Balochistan?
A: Baloch
Q: Does Balochistan have a Shaktipeet?
A: Yes
Q: What is the name of Shaktipeeta which is there in Balochistan?
India vs Pakistan War: ಕರಾಚಿ ಬಂದರನ್ನು ಉಡೀಸ್ ಮಾಡಿದ ಭಾರತೀಯ ನೌಕಾಸೇನೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿದ್ದ ಪಾಕಿಸ್ತಾನಕ್ಕೆ ನಮ್ಮ ಭಾರತ ತಕ್ಕ ಉತ್ತರ ಈಗ ಕೊಟ್ಟಿದ್ದೆ. ಸಾಕಷ್ಟು ಸಲ ಎಚ್ಚರಿಕೆ ಕೊಟ್ಟ ಮೇಲು ಪಾಕಿಸ್ತಾನ(pakistan) ಭಯೋತ್ಪಾದನೆಯನ್ನು ಪುರಸ್ಕರಿಸುತ್ತ ಭಾರತದ ಮೇಲೆ ಅಪ್ರಚೋದಿತ ದಾಳಿ ಮಾಡಿ ಯುದ್ಧಕ್ಕೆ ಕುಮ್ಮಕ್ಕು ಕೊಟ್ಟಿದ್ದೆ. ಆಪರೇಷನ್ ಸಿಂಧೂರ ಲಾಂಚ್ ಮಾಡಿ ಭಾರತ ಪೆಹಲ್ಗಾಮ್ ದಾಳಿಗೆ ಪ್ರತಿಕಾರ ತೀರಿಸಿದಾದರೂ, ಪಾಕಿಸ್ತಾನ ಭಯೋತ್ಪಾದನಾ ಕೃತ್ಯವನ್ನು ಸಮರ್ಥಿಸಿ ಯುದ್ಧಕ್ಕೆ ನಿಂತು ಇಂದು ಇಂಗು ತಿಂದ ಮಂಗನಂತಾಗಿದೆ.
ಭಾರತದ ದಾಳಿಗೆ ತತ್ತರಿಸಿ ಹೋದ ಪಾಕಿಸ್ತಾನ ಎಷ್ಟೇ ದಾಳಿಗೆ ಪ್ರಯತ್ನಿಸಿದರೂ ಮತ್ತೆ ಮತ್ತೆ ಸೋಲುತ್ತಿದೆ. ಮತ್ತು ಭಾರತದ ವಿಲೀಟರಿ ಶಕ್ತಿ ಎಷ್ಟಿದೆ ಎಂದು ಇಡೀ ಪ್ರಪಂಚಕ್ಕೆ ತಿಳಿಯುವಂತಾಗಿದೆ. ಅದಕ್ಕೆ ಪೂರಕವೆಂಬಂತೆ ಭಾರತ ಸ್ವಂತ ಅಭಿವೃದ್ಧಿ ಪಡಿಸಿದ ಮಿಲಿಟರಿ ನೌಕೆ ಐಎನ್ಎಸ್ ವಿಕ್ರಾಂತ್ ಪಾಕಿಸ್ತಾನದ ಬಂದರುಗಳಾದ ಕರಾಚಿ ಮತ್ತು ಓರ್ಮರವನ್ನು ಉಡೀಸ್ ಮಾಡಿದೆ. ಐಎನ್ಎಸ್ ವಿಕ್ರಾಂತ್(INS Vikrant) ಇಷ್ಟು ಶಕ್ತಿಶಾಲಿಯಾಗಿ ದಾಳಿ ಮಾಡಬಲ್ಲದು ಎಂದು ಯಾರೂ ಸಹ ಊಹಿಸಿರಲಿಲ್ಲ. ಕರಾಚಿ ಬಂದರು ಛಿದ್ರಗೊಂಡಿದ್ದರಿಂದ ಪಾಕಿಸ್ತಾನವು ಬೆಚ್ಚಿಬಿದ್ದಿದೆ.
ಪೆಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ವೈಮಾನಿಕ ದಾಳಿಯಿಂದ ಪಾಕಿಸ್ತಾನ ೯ ಉಗ್ರ ಅಡಗುತಾಣ ನೆಲಸಮಗೊಂಡಿದೆ. ಸದ್ಯ ಇಂಟರ್ನೆಟ್ ನಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೊವೊಂದರಲ್ಲಿ, ಪಾಕಿಸ್ತಾನಿ ಟಿವಿ ಚಾನೆಲ್ ನ ಸುದ್ದಿ ನಿರೂಪಕಿ ಎಂದು ಹೇಳಲಾದ ಮಹಿಳೆಯೊಬ್ಬರು ಸುದ್ದಿ ನೇರ ಪ್ರಸಾರದ ಸಮಯದಲ್ಲಿ ದುಃಖಿಸುತ್ತಿರುವುದು ಕಂಡುಬಂದಿದೆ. ವೀಡಿಯೊದಲ್ಲಿ, ‘ಆಪರೇಷನ್ ಸಿಂಧೂರ್’ ನ ಭಾಗವಾಗಿರುವ ಭಾರತೀಯ ವೈಮಾನಿಕ ದಾಳಿಯ ನಂತರ ಜೀವಹಾನಿ ಸಂಭವಿಸಿದ್ದಕ್ಕಾಗಿ ಉಸಿರುಗಟ್ಟಿದ ಧ್ವನಿಯೊಂದಿಗೆ, ದಾಳಿಯಿಂದ ಪ್ರಭಾವಿತರಾದ ಮುಗ್ಧ ಆತ್ಮಗಳಿಗೆ ಅಲ್ಲಾಹನಿಂದ ಶಕ್ತಿ ಮತ್ತು ಕರುಣೆಗಾಗಿ ಅವರು ಮನವಿ ಮಾಡುತ್ತಾ ಕಣ್ಣೀರು ಹಾಕುತ್ತಾ ದುಃಖಿಸುತ್ತಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯಾಸತ್ಯತೆ ಕೂಡಿದೆ ಎಂದು ಸ್ಪಷ್ಟವಿಲ್ಲ. ಅಳುತ್ತಿರುವ ಟಿವಿ ನಿರೂಪಕಿ ಮಹಿಳೆ ಸುದ್ದಿ ವಾಹಿನಿಗೆ ಸಂಬಂಧಿಸಿದ್ದಾಳೆ ಅಥವಾ ಇಲ್ವಾ ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ವರದಿಗಳಿಲ್ಲ. ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ 26 ನಾಗರಿಕರನ್ನು ಕೊಂದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ನಡೆಸಲಾದ ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತವು ಇತ್ತೀಚೆಗೆ ನಡೆಸಿದ ಮಿಲಿಟರಿ ಕ್ರಮಕ್ಕೆ ಪ್ರತಿಕ್ರಿಯೆಯಾಗಿ ಈ ಭಾವನಾತ್ಮಕ ಪ್ರಕೋಪವನ್ನು ವ್ಯಾಪಕವಾಗಿ ಅರ್ಥೈಸಲಾಗುತ್ತಿದೆ. ಮೋದಿ ಹೋಗಿ ಹೇಳು ಎಂದು ಭಯೋತ್ಪಾದಕರು ಹೇಳಿದ್ದರೆನ್ನಲಾದ ಮಾತಿಗೆ ಮೋದಿ ಸರಿಯಾಗಿ ಉತ್ತರ ನೀಡಿದ್ದಾರೆ ಎಂದು ಭಾರತೀಯರು ಸಂತಸ ಪಟ್ಟಿದ್ದಾರೆ.
ಮೇ 2 ರಂದು ರಾಜ್ಯಾದ್ಯಂತ The Karnataka School Examination and Assessment Board (KSEAB) ಈ ಸಾಲಿನ SSLC ಫಲಿತಾಂಶವನ್ನು ತನ್ನ ವೆಬ್ಸೈಟ್ ನಲ್ಲಿ ಪ್ರಕಟಿಸಿದೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದರೆ ಉಡುಪಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಈ ಸಲನೂ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ.
2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕೆಯ್ಯೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ (KPS Keyyur)ಗೆ 90.24% ಫಲಿತಾಂಶ ಬಂದಿದ್ದು, ಕೆಲವು ವಿದ್ಯಾರ್ಥಿಗಳು ಈಗಾಗಲೇ ಮರು ಮೌಲ್ಯಮಾಪನಕ್ಕೆ ಹಾಕಿರುವುದರಿಂದ ಇನ್ನಷ್ಟು ಹೆಚ್ಚಿನ ಫಲಿತಾಂಶ ಬರುವ ನಿರೀಕ್ಷೆಯಿದೆ. ಕೆಪಿಎಸ್ ಕೆಯ್ಯೂರಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾದ ಒಟ್ಟು 82 ವಿದ್ಯಾರ್ಥಿಗಳ ಪೈಕಿ 74 ವಿದ್ಯಾರ್ಥಿಗಳು ಉತ್ತೀರ್ಣರಾಗಿ 90.24 ಶೇಕಡಾ ಫಲಿತಾಂಶವನ್ನು ದಾಖಲಾಗಿದೆ. ಇವರಲ್ಲಿ 10 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ಶಿಕ್ಷಕರು ಮತ್ತು ಹೆತ್ತವರು ಹೆಮ್ಮೆ ಪಡುವಂತಾಗಿದೆ. ಅಲ್ಲದೆ 38 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು 21 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಪಡೆದುಕೊಂಡಿದ್ದಾರೆ. 7 ಜನ ವಿದ್ಯಾರ್ಥಿಗಳಿಗೆ ಎ ಪ್ಲಸ್ ಗ್ರೇಡ್ ಲಭಿಸಿದೆ.
ಅಸ್ಮಿತಾ. ಎಸ್ 609 ಅಂಕಗಳನ್ನು ಪಡೆದು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಹಾಗೂ ಸ್ಮಿತಾ ಯು 604 ಅಂಕ ಪಡೆದು ಶಾಲೆಗೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಉಳಿದಂತೆ ರಾಯಲ್ ಡಿಸೋಜಾ -593 ಅಂಕ, ಮುಹಮ್ಮದ್ ಅನ್ಸಾರ್ ಕೆ.ಎ – 590 ಅಂಕ, ಫಾತಿಮತ್ ಶಮ್ನ – 576 ಅಂಕ, ತೇಜಸ್ – 571 ಅಂಕ, ಫಾತಿಮತ್ ಸಿಫಾ – 571 ಅಂಕ, ಯಕ್ಷಿತಾ – 558 ಅಂಕ, ಅಫ್ರೀನ – 546 ಅಂಕ, ಸಾನ್ವಿ ಡಿ.ಪಿ – 541 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಗೆ ಅರ್ಹರಾಗಿದ್ದಾರೆ, ಎಂದು ಶಾಲೆಯ ಉಪ ಪ್ರಾಂಶುಪಾಲರಾದ ವಿನೋದ್ ಕುಮಾರ್ ಕೆಎಸ್ ತಿಳಿಸಿದ್ದಾರೆ.
609 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಅಸ್ಮಿತ ಎಸ್ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಶುಂಠಿಮಜಲಿನ ನಿವಾಸಿ ಅವಿನಾಶ್ ಪೂಜಾರಿ ಮತ್ತು ಸುಜಾತ ದಂಪತಿಯ ಪುತ್ರಿ. ಕಲಿಕೆ ಹಾಗೂ ಶಾಲೆಯ ಇನ್ನಿತರ ಚಟುವಟಿಕೆಯಲ್ಲೂ ಮುಂದಿರುವ ಅಸ್ಮಿತಾ ಭವಿಷ್ಯದಲ್ಲಿ IAS ಅಧಿಕಾರಿ ಆಗಬೇಕೆಂಬ ಕನಸನ್ನು ಇಟ್ಟುಕೊಂಡಿದ್ದಾಳೆ. ಮಗಳ ಸಾಧನೆಯನ್ನು ಕಂಡು ಹೆತ್ತವರು ಸಹ ಹೆಮ್ಮೆ ಪಡುತ್ತಿದ್ದಾರೆ.
604 ಅಂಕಗಳನ್ನು ಪಡೆದು ಶಾಲೆಗೆ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿನಿ ಸ್ಮಿತಾ ಯು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಅಂಕತಡ್ಕದ ನಿವಾಸಿ ಉಮೇಶ ಎಪಿ ಹಾಗೂ ಚಿತ್ರಾವತಿ ಕೆ ಎಮ್ ದಂಪತಿಯ ಮಗಳು. ಆಕೆಯ ನಿರೀಕ್ಷೆಯಂತೆ ಉತ್ತಮ ಅಂಕ ಬಂದಿರುವುದು ಖುಷಿ ತಂದಿದೆ ಎಂದು ಮಾದ್ಯಮಕ್ಕೆ ತಿಳಿಸಿದ್ದಾಳೆ. ಮುಂದೆ ಉನ್ನತ ಶಿಕ್ಷಣ ಪಡೆದು ಉನ್ನತ ಉದ್ಯೋಗ ಗಳಿಸುವ ಅಸೆ ಇವಳದ್ದಾಗಿದೆ. ತನ್ನ ಶೈಕ್ಷಣಿಕ ಸಾಧನೆಗೆ ಕಾರಣರಾದ ಹೆತ್ತವರು ಹಾಗೂ ಶಿಕ್ಷಕರ ಪ್ರೋತ್ಸಾಹವನ್ನು ಅವಳು ಕೃತಜ್ಞತೆಯಿಂದ ಸ್ಮರಿಸುತ್ತಾಳೆ.
Viral Whatsapp Message: ಪೆಹಲ್ಗಾಮ್ ಘಟನೆಯ ಬಳಿಕ ದೇಶದಲ್ಲಿ ಒಂದು ತಪ್ಪು ಸಂದೇಶವೊಂದು ವೈರಲ್ ಆಗುತ್ತಿದೆ. ಇದರ ಬಗ್ಗೆ ಕೇಂದ್ರ ಸರಕಾರ ಎಚ್ಚರಿಕೆ ಸಂದೇಶ ರವಾನಿಸಿದ್ದು, ಯಾರು ಸಹ ಇದನ್ನು ಪರಿಗಣಿಸಬಾರದು ಎಂದು ತಿಳಿಸಿದೆ. ಭಾರತೀಯ ಸೇನೆಯ ಆಧುನೀಕರಣಕ್ಕಾಗಿ ನಿಧಿ ಸಂಗ್ರಹಕ್ಕಾಗಿ ಸರ್ಕಾರ ಬ್ಯಾಂಕ್ ಖಾತೆಯನ್ನು ತೆರೆಯಲಾಗಿದೆ ಎಂದು ಹೇಳುವ ತಪ್ಪು ಸಂದೇಶವು ವಾಟ್ಸಾಪ್ನಲ್ಲಿ ಇತ್ತೀಚೆಗೆ ಹರಿದಾಡುತ್ತಿದೆ ಎಂದು ರಕ್ಷಣಾ ಸಚಿವಾಲಯ ಭಾನುವಾರ ಎಚ್ಚರಿಸಿದೆ.
ರಕ್ಷಣಾ ಸಚಿವಾಲಯ ತನ್ನ ಸಂದೇಶದಲ್ಲಿ ”ಇಂತಹ ಯಾವುದೇ ಸಂದೇಶಗಳು ಸರಕಾರದಿಂದ ರವಾನೆಯಾಗಿಲ್ಲ ಮತ್ತು ಇದು ಮೋಸಗಾರರು ರಚಿಸಿದ ಮೋಸದ ಜಾಲ ಆಗಿರಬಹುದು. ಇದಕ್ಕೆ ಯಾರೂ ಸಹ ಬಲಿಯಾಗಬೇಡಿ ಎಂದು ತಿಳಿಸಿದೆ. ಅಕ್ಷಯ ಕುಮಾರ್ ಅವರ ಹೆಸರನ್ನು ಪ್ರಧಾನ ಪ್ರವರ್ತಕ ಎಂದು ಬಿಂಬಿಸಿ ಈ ಸಂದೇಶ ರವಾನೆಯಾಗಿರುವುದರ ಕುರಿತು ಹೇಳಲಾಗಿದೆ.
ಯಾವುದೇ ರೀತಿಯ ಸಕ್ರಿಯ ಯುದ್ಧ ಕಾರ್ಯಾಚರಣೆಯ ಸಮಯದಲ್ಲಿ ಅಥವಾ ರಕ್ಷಣಾ ಕಾರ್ಯದ ಸಮಯದಲ್ಲಿ ಮೃತಪಟ್ಟ ಅಥವಾ ಅಂಗವಿಕಲರಾದ ಸೈನಿಕರಿಗಾಗಿ ಸರ್ಕಾರ ಹಲವಾರು ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ನಿನ್ನೆ ಬಜ್ಪೆಯಲ್ಲಿ ಕಿಡಿಗೇಡಿಗಳಿಂದ ಬರ್ಬರವಾಗಿ ಹತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ತಾಯಿಗೆ ಆತನ ಸಾವಿನ ಸುದ್ದಿ ತಿಳಿಸಿರಲಿಲ್ಲ. ಅಸ್ವಸ್ಥರಾಗಿದ್ದ ಸುಹಾಸ್ ನ ತಾಯಿಗೆ ಇಂದು ಮಗನ ಸಾವಿನ ಸುದ್ಧಿ ತಿಳಿದು ಇನ್ನಷ್ಟು ಆರೋಗ್ಯದಲ್ಲಿ ಏರುಪೇರಾಗಿದ್ದು ಮಗನನ್ನು ಕಳೆದುಕೊಂಡ ತಾಯಿಯ ನೋವು ಊಹಿಸಲು ಸಾಧ್ಯವಿಲ್ಲ. ಕೆಲಸದ ನಿಮಿತ್ತ ದೂರ ಇರುತ್ತಿದ್ದ ಸುಹಾಸ್ ನೊಂದಿಗೆ ದಿನಾಲೂ ಅಮ್ಮ ಫೋನ್ ನಲ್ಲಿ ಮಾತನಾಡುತ್ತ ಯೋಗ ಕ್ಷೇಮ ವಿಚಾರಿಸುತ್ತಿದ್ದರು. ಆದರೆ ಸುಹಾಸ್ ಶೆಟ್ಟಿ ಕೊಲೆಯಾಗುವ ದಿನ ತನ್ನ ತಾಯಿಗೆ ಎಂದಿನಂತೆ ಕರೆ ಮಾಡಿದ್ದರೂ ಸಹ ತಾಯಿ ಸುಲೋಚನಾ ಅನಿವಾರ್ಯ ಕಾರಣದಿಂದ ಕರೆ ಸ್ವೀಕರಿಸಲಿಲ್ಲ. ಇದನ್ನು ಈಗ ಸುಲಚನಾ ಅವರು ನೆನೆದು ಕಡೇ ದಿನ ಮಗನ ಜೊತೆ ಮಾತನಾಡಲಿಲ್ಲವಲ್ಲ ಎಂದು ಕೊರಗುತ್ತಿದ್ದಾರೆ.
“ನಿತ್ಯವೂ ಫೋನ್ ಮೂಲಕ ಮಗನ ಜೊತೆ ಮಾತನಾಡುತ್ತಿದ್ದೆ. ಆದರೆ ನಿನ್ನೆ ಸಂಬಂಧಿಕರ ಮದುವೆ ಇದ್ದ ಕಾರಣ ಸುಹಾಸ್ ಶೆಟ್ಟಿ ಫೋನ್ ಮಾಡಿದರೂ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಆದರೆ ಸಂಜೆ ಫೋನ್ ಮಾಡಿದಾಗ ಸ್ವಿಚ್ ಆಫ್ ಆಗಿತ್ತು”. ಎಂದು ಅಮ್ಮ ನೋವನ್ನು ಹೇಳಿಕೊಂಡರು. ಬೆಳಗ್ಗೆಯಿಂದ ಸಂಜೆವರೆಗೆ ಮದುವೆ ಕಾರ್ಯಕ್ರಮದಲ್ಲಿದ್ದ ಕಾರಣ ಸುಹಾಸ್ ಶೆಟ್ಟಿಗೆ ಮರಳಿ ಫೋನ್ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಮದುವೆ ಕಾರ್ಯಕ್ರಮ ಮುಗಿಸಿ ಫೋನ್ ಮಾಡಿದಾಗ ಸುಹಾಸ್ ಶೆಟ್ಟಿ ಫೋನ್ ಸ್ವಿಚ್ ಆಫ್ ಆಗಿತ್ತು. ಅಷ್ಟೊತ್ತಿಗಾಗಲೇ ಸುಹಾಸ್ ಶೆಟ್ಟಿಯನ್ನು ಹತ್ಯೆ ಮಾಡಲಾಗಿತ್ತು ಎಂದು ತಾಯಿ ಸುಲೋಚನಾ ಕಣ್ಣೀರಿಟ್ಟಿದ್ದಾರೆ.
ಸುಹಾಸ್ ನನ್ನ ಕೊಲೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು. ತಾಯಿಯ ನೋವು ಯಾರಿಗೂ ಅರ್ಥವಾಗಲ್ಲ. ಹಿಂದುತ್ವವನ್ನೇ ಉಸಿರಾಗಿಸಿದ್ದ ನನ್ನ ಮಗ ಇಂದು ನಮ್ಮನ್ನು ಬಿಟ್ಟು ಅಗಲಿದ್ದಾನೆ ಎಂದು ಸುಹಾಸ್ ಶೆಟ್ಟಿ ತಾಯಿ ಸುಲೋಚನಾ ಹೇಳಿದ್ದಾರೆ. ಸುಹಾಸ್ ಶೆಟ್ಟಿ ಮನೆಯಲ್ಲಿ ಕುಟುಂಬದವರ ಮತ್ತು ಆಪ್ತ ಬಳಗದವರ ಆಕ್ರಂದನ ಮುಗಿಲು ಮುಟ್ಟಿದೆ. ಪೊಲೀಸ್ ಇಲಾಖೆ ಆದಷ್ಟು ಬೇಗ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಲು ತನಿಖೆ ಚುರುಕುಗೊಳಿಸಬೇಕು ಮತ್ತು ಕೊಲೆಗಡುಕರು ಮರಣದಂಡನೆ ಶಿಕ್ಷೆಯಾಗಬೇಕು ಎಂಬುದು ಸಮಾಜದ ಆಶಯ.
Mangalore: ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂದು ಸುದ್ದಿಗೋಷ್ಠಿಯಲ್ಲಿ ಈ ಸಾಲಿನ ಎಸ್ಸೆಸ್ಸಲ್ಸಿ ಫಲಿತಾಂಶದ ಪ್ರಕಟಣೆಯ ದಿನಾಂಕ ಮತ್ತು ಸಮಯವನ್ನು ಪ್ರಕಟಿಸಿದರು. ಈ ವರ್ಷದ ಎಸ್ಸೆಸ್ಸಲ್ಸಿ ಪರೀಕ್ಷೆಯ ಫಲಿತಾಂಶವು ನಾಳೆ (Karnataka SSLC Result 2025) ದಿನಾಂಕ 2 ಮೇ ರಂದು ಬೆಳಗ್ಗೆ 11 ಗಂಟೆಗೆ ಪ್ರಕಟವಾಗಲಿದೆ. ಕಾತುರದಿಂದ ಫಲಿತಾಂಶವನ್ನು ಕಾಯುತ್ತಿರುವ ವಿದ್ಯಾರ್ಥಿಗಳು ನಾಳೆ 12.30 ಗಂಟೆಗೆ ಇಲಾಖೆಯ (The Karnataka School Examination and Assessment Board (KSEAB)) ಅಧಿಕೃತ ವೆಬ್ಸೈಟ್ನಲ್ಲಿ ನೋಡಬಹುದು.
ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಈ ಕೆಳಗೆ ಕೊಟ್ಟಿರುವ ವೆಬ್ಸೈಟ್ ನಲ್ಲಿ ಪರಿಶೀಲಿಸಬಹುದು.
ಕಳೆದ ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ರಾಜ್ಯಾದ್ಯಂತ ನಡೆದ ಎಸ್.ಎಸ್.ಎಲ್.ಸಿಯ ಪರೀಕ್ಷೆಯಲ್ಲಿ ರಾಜ್ಯದ ಒಟ್ಟು 8.90 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ವಿದ್ಯಾರ್ಥಿಗಳು ನಾಳೆಯ ಫಲಿತಾಂಶವನ್ನು ಧನಾತ್ಮಕವಾಗಿ ಸ್ವೀಕರಿಸಿ, ಮುಂದಿನ ಭವಿಷ್ಯಕ್ಕೆ ಉತ್ತಮ ಬುನಾದಿಯನ್ನು ಕಂಡುಕೊಳ್ಳಬೇಕು ಮತ್ತು ತಾನು ಊಹಿಸಿದಷ್ಟು ಫಲಿತಾಂಶ ಬರದಿದ್ದರೆ ದಯವಿಟ್ಟು ಯಾವುದೇ ಅಹಿತಕರ ಘಟನೆಗೆ ಎಡೆ ಮಾಡಿಕೊಡದೆ ಮುಂದಿನ ಭವಿಷ್ಯಕ್ಕೆ ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಜೀವನಕ್ಕೆ ಕೇವಲ ನಾಳಿನ ಫಲಿತಾಂಶ ಮಾತ್ರ ಮುಖ್ಯವಲ್ಲ ಎಂಬುದನ್ನು ಮನದಲ್ಲಿಟ್ಟುಕೊಂಡು, ತನ್ನ ಹೆತ್ತವರಲ್ಲಿ ಅಥವಾ ಪಾಲಕರಲ್ಲಿ ಭವಿಷ್ಯದ ಬಗ್ಗೆ ಉತ್ತಮ ಚಿಂತನೆ ಮಾಡಿಕೊಂಡು ಮುಂದಿನ ಹೆಜ್ಜೆ ಇಡಬೇಕೆಂದು ನಮ್ಮ ಆಶಯ. All The Best
ಈ ಲೇಖನವನ್ನು ಸೇವ್ ಮಾಡಿ ಇಟ್ಟುಕೊಳ್ಳಿ. ನಾಳೆ 10th ಫಲಿತಾಂಶ ಪ್ರಕಟವಾಗುವಾಗ ನೇರವಾಗಿ ನಿಮ್ಮ ಫಲಿತಾಂಶವನ್ನು ವೀಕ್ಷಿಸಬಹುದು. All The Best.
Tags: sslc result 2025, The Karnataka School Examination and Assessment Board (KSEAB), sslc result 2025 karnataka, When 10 result 2025, sslc result link, ಎಸ್.ಎಸ್.ಎಲ್.ಸಿ.
FAQ
Q: When will the SSLC result be in 2025 karnataka?
A: May 2nd
Q: What time can I check SSLC results on a website?
Pidayi Tulu Cinema: 2025 ತುಳು ಸಿನಿಮಾಗಳಿಗೆ ಪರ್ವ ಕಾಲ. ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಿದ್ಧಗೊಂಡಿದೆ ಮತ್ತು ಹೆಚ್ಚಿನ ಸಿನಿಮಾಗಳು ದಿನಾಂಕವನ್ನು ಸಹ ಘೋಷಣೆ ಮಾಡಿಕೊಂಡಿದೆ. ಇತ್ತೀಚೆಗೆ ಧರ್ಮಚಾವಡಿ ತನ್ನ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿಕೊಂಡಿದ್ದು, ಈಗ ನಮ್ಮ ಕನಸು ಬ್ಯಾನರಿನಲ್ಲಿ ಕೆ. ಸುರೇಶ್ ಅವರು ನಿರ್ಮಿಸಿದ, ರಮೇಶ್ ಶೆಟ್ಟಿಗಾರ್ ಬರೆದಿರುವ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶಿಸಿದ ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ‘ಪಿದಾಯಿ’ Pidayi Tulu Cinema ತುಳು ಚಲನಚಿತ್ರ ಕರಾವಳಿಯಾದ್ಯಂತ ತೆರೆಕಾಣಲು ಮೇ 9ಕ್ಕೆ ದಿನ ನಿಗದಿಮಾಡಿಕೊಂಡಿದೆ. ಇದರ ಬಗ್ಗೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ಸಂತೋಷ್ ಮಾಡ ಅವರು ತಿಳಿಸಿದರು.
ಬಹುನಿರೀಕ್ಷಿತ ‘ಪಿದಾಯಿ’ ಚಿತ್ರವು ಈಗಾಗಲೇ ಕೊಲ್ಕತ್ತಾ ಸಿಮ್ಲಾ, ಜಾರ್ಖಂಡ್ ಹಾಗೂ ಕ್ಯಾಲಿಫೋರ್ನಿಯಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ಆಯ್ಕೆಯಾಗುವುದರ ಜೊತೆಗೆ, 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಬಾರಿಗೆ ತುಳು ಚಿತ್ರವೊಂದು ಭಾರತೀಯ ಚಲನಚಿತ್ರ ಹಾಗೂ ಕನ್ನಡ ಚಲನಚಿತ್ರ ವಿಭಾಗಗಳಲ್ಲಿ ಸ್ಪರ್ಧೆಗೆ ಆಯ್ಕೆಯಾಗಿದ್ದು, ಎರಡನೇ ಅತ್ಯುತ್ತಮ ಚಿತ್ರ ಎಂದು ಪ್ರಶಸ್ತಿಯನ್ನು ಸಹ ಪಡೆದಿದೆ.
ವಿಶೇಷವೆಂದರೆ ತುಳುನಾಡಿನ ವಿಶೇಷತೆಯಾದ ಕುಣಿತ ಭಜನೆಯನ್ನು ಮೊದಲ ಬಾರಿಗೆ ತುಳು ಸಿನಿಮಾದಲ್ಲಿ ಪ್ರಯೋಗಿಸಿದ್ದು, ಯೋಗೀಶ್ ಅಡಕಳಕಟ್ಟೆ ಮತ್ತು ಖ್ಯಾತ ಸಿನಿಮಾ ಸಾಹಿತಿ ಶಶಿರಾಜ್ ಕಾವೂರವರು ಈ ಕುಣಿತ ಭಜನೆಗೆ ಸಾಹಿತ್ಯವನ್ನು ಬರೆದಿದ್ದಾರೆ. ಒಂದು ಸಾಹಿತ್ಯಕ್ಕೆ ಸಂದೀಪ್ ಬಲ್ಲಾಳ್ ಸಂಗೀತ ನೀಡಿದರೆ ಇನ್ನೊಂದು ಕುಣಿತ ಭಜನೆಗೆ ಶಿನೋಯ್ ಜೋಸೆಫ್ ಸಂಗೀತ ನೀಡಿದ್ದಾರೆ.
ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಮಹಾಮಾಯಿ ಪಾತ್ರಿಯಾಗಿ ಕನ್ನಡದ ಖ್ಯಾತ ನಟ ಶರತ್ ಲೋಹಿತಾಶ್ವ ಅಭಿನಯಿಸಿದ್ದಾರೆ. ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೋಳಾರ್, ರೂಪಶ್ರೀ ವರ್ಕಾಡಿ, ಇಳಾ ವಿಟ್ಲ ದೇವಿ ನಾಯರ್, ಪ್ರೀತೇಶ್, ಅನಿಲ್ ರಾಜ್ ಉಪ್ಪಳ, ರವಿ ವರ್ಕಾಡಿ, ಹಾಗೂ ಬಾಲ ಪ್ರತಿಭೆಗಳಾದ ಮೋನಿಶ್, ತ್ರಿಷ, ಧ್ರುವ, ನಿಹಾ, ಖುಷಿ ಡಿಬಿಸಿ ಶೇಖರ್, ಅನಿತಾ ಚಂದ್ರಶೇಖರ್ ಮುಂತಾದವರು ಅಭಿನಯಿಸಿದ್ದಾರೆ. ಉಣ್ಣೆ ಮಾಡವೂರ್ ಛಾಯಾಗ್ರಾಹಣ, ಸುರೇಶ್ ಅರಸ್ ಸಂಕಲನ, ರಮೇಶ್ ಶೆಟ್ಟಿಗಾರ್ ಹಾಗೂ ಡಿ.ಬಿ.ಸಿ ಶೇಖರ್ ಸಂಭಾಷಣೆ ಬರೆದಿದ್ದಾರೆ. ಅಜಯ್ ನಂಬೂದಿರಿ ಈ ಸಿನಿಮಾಕ್ಕೆ ಸಂಗೀತ ನೀಡಿದ್ದು, ಡಾ| ವಿದ್ಯಾಭೂಷಣ್ ಪ್ರಥಮವಾಗಿ ಚಲನಚಿತ್ರದಲ್ಲಿ ಹಾಡಿದ್ದಾರೆ. ಹಿನ್ನಲೆ ಗಾಯಕರಾದ ಮೇಧ ವಿದ್ಯಾಭೂಷಣ್, ವಿಜೇಶ್ ಗೋಪಾಲ್ ಮುಂತಾದವರು ಕಂಠದಾನ ಮಾಡಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಹಿನ್ನೆಲೆ ರಾಜ್ಯಗಳಲ್ಲಿರುವ ಪಾಕ್ ಪ್ರಜೆಗಳನ್ನು ಪತ್ತೆ ಹಚ್ಚಿ ತಕ್ಷಣ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸುವ ವ್ಯವಸ್ಥೆ ಮಾಡಬೇಕೆಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಖಡಕ್ ಸೂಚನೆ ನೀಡಿದ್ದಾರೆ. ಕೇಂದ್ರ ಸರಕಾರ ನೀಡಿರುವ ಈ ಸಂದೇಶಕ್ಕೆ ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯದ ಗೃಹ ಮಂತ್ರಿಗಳಾದ ಜಿ ಪರಮೇಶ್ವರ್ ಮಾತನಾಡಿ, ನಮ್ಮ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕ್ ಪ್ರಜೆಗಳನ್ನು ಅತೀ ಶೀಘ್ರದಲ್ಲೂ ಪತ್ತೆ ಹಚ್ಚಿ ಗಡಿಪಾರು ಮಾಡಲಾಗುವುದು. ಮತ್ತು ಅಡಗಿ ಕುಳಿತಿರುವ ಭಯೋತ್ಪಾದಕರಿದ್ದಲ್ಲಿ (ಸ್ಲೀಪರ್ ಸೆಲ್) ಅವರನ್ನು ಪತ್ತೆ ಹಚ್ಚಲು ಪೂರ್ಣ ಪ್ರಯತ್ನ ಪಡುತ್ತೇವೆ ಮತ್ತು ರಾಷ್ಟ್ರೀಯ ಭದ್ರತಾ ಪಡೆಗಳಿಗೆ ವಿಷಯ ತಿಳಿಸುತ್ತೇವೆ.
2019 ರಲ್ಲಿ ಪುಲ್ವಾಮಾ ನಡೆದ ದಾಳಿಯಲ್ಲಿ ಸುಮಾರು ೪೦ ಸಿಆರ್ಪಿಫ್ ಯೋಧರ ಹತ್ಯೆಯ ನಂತರ ಪೆಹಲ್ಗಾಮ್ ದಾಳಿಯೇ ಅತ್ಯಂತ ಭೀಕರ ದಾಳಿಯಾಗಿದೆ. ಈ ಘಟನೆಯನ್ನು ನರೇಂದ್ರ ಮೋದಿ ಮತ್ತು ಅಮಿತ್ ಶಾ ಬಹಳ ಸೂಕ್ಷ್ಮವಾಗಿ ಪರಿಗಣಿಸಿದ್ದು, ಅತೀ ಬೇಗನೆ ಈ ದಾಳಿಗೆ ಪ್ರತ್ಯುತ್ತರ ನೀಡುವ ಸೂಚನೆಯನ್ನು ನೀಡಿದ್ದಾರೆ. ಲಭ್ಯವಿರುವ ಮಾಹಿತಿ ಪ್ರಕಾರ ಭಾರತೀಯ ಸೇನೆ ಈಗಾಗಲೇ ಪಾಕ್ ಗಡಿ ಪ್ರದೇಶದಲ್ಲಿ ಅಡಗಿರುವ ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಪ್ರಾರಂಭಿಸಿದ್ದಾರೆ. ಈಗಾಗಲೇ ಎರಡು ಪ್ರಮುಖ ಭಯೋತ್ಪಾದಕರ ನಾಯಕರನ್ನು ಹೊಡೆದುರುಳಿಸಲಾಗಿದೆ ಎಂದು ತಿಲಿಸಲಾಗಿದೆ.