India vs Pakistan War: ಕರಾಚಿ ಬಂದರನ್ನು ಉಡೀಸ್ ಮಾಡಿದ ಭಾರತೀಯ ನೌಕಾಸೇನೆ

India vs Pakistan War

ಕರಾಚಿ ಬಂದರನ್ನು ಉಡೀಸ್ ಮಾಡಿದ ಭಾರತೀಯ ನೌಕಾಸೇನೆ

India vs Pakistan War: ಕರಾಚಿ ಬಂದರನ್ನು ಉಡೀಸ್ ಮಾಡಿದ ಭಾರತೀಯ ನೌಕಾಸೇನೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿದ್ದ ಪಾಕಿಸ್ತಾನಕ್ಕೆ ನಮ್ಮ ಭಾರತ ತಕ್ಕ ಉತ್ತರ ಈಗ ಕೊಟ್ಟಿದ್ದೆ. ಸಾಕಷ್ಟು ಸಲ ಎಚ್ಚರಿಕೆ ಕೊಟ್ಟ ಮೇಲು ಪಾಕಿಸ್ತಾನ(pakistan) ಭಯೋತ್ಪಾದನೆಯನ್ನು ಪುರಸ್ಕರಿಸುತ್ತ ಭಾರತದ ಮೇಲೆ ಅಪ್ರಚೋದಿತ ದಾಳಿ ಮಾಡಿ ಯುದ್ಧಕ್ಕೆ ಕುಮ್ಮಕ್ಕು ಕೊಟ್ಟಿದ್ದೆ. ಆಪರೇಷನ್ ಸಿಂಧೂರ ಲಾಂಚ್ ಮಾಡಿ ಭಾರತ ಪೆಹಲ್ಗಾಮ್ ದಾಳಿಗೆ ಪ್ರತಿಕಾರ ತೀರಿಸಿದಾದರೂ, ಪಾಕಿಸ್ತಾನ ಭಯೋತ್ಪಾದನಾ ಕೃತ್ಯವನ್ನು ಸಮರ್ಥಿಸಿ ಯುದ್ಧಕ್ಕೆ ನಿಂತು ಇಂದು ಇಂಗು ತಿಂದ ಮಂಗನಂತಾಗಿದೆ.

ಭಾರತದ ದಾಳಿಗೆ ತತ್ತರಿಸಿ ಹೋದ ಪಾಕಿಸ್ತಾನ ಎಷ್ಟೇ ದಾಳಿಗೆ ಪ್ರಯತ್ನಿಸಿದರೂ ಮತ್ತೆ ಮತ್ತೆ ಸೋಲುತ್ತಿದೆ. ಮತ್ತು ಭಾರತದ ವಿಲೀಟರಿ ಶಕ್ತಿ ಎಷ್ಟಿದೆ ಎಂದು ಇಡೀ ಪ್ರಪಂಚಕ್ಕೆ ತಿಳಿಯುವಂತಾಗಿದೆ. ಅದಕ್ಕೆ ಪೂರಕವೆಂಬಂತೆ ಭಾರತ ಸ್ವಂತ ಅಭಿವೃದ್ಧಿ ಪಡಿಸಿದ ಮಿಲಿಟರಿ ನೌಕೆ ಐಎನ್ಎಸ್ ವಿಕ್ರಾಂತ್ ಪಾಕಿಸ್ತಾನದ ಬಂದರುಗಳಾದ ಕರಾಚಿ ಮತ್ತು ಓರ್ಮರವನ್ನು ಉಡೀಸ್ ಮಾಡಿದೆ. ಐಎನ್ಎಸ್ ವಿಕ್ರಾಂತ್(INS Vikrant) ಇಷ್ಟು ಶಕ್ತಿಶಾಲಿಯಾಗಿ ದಾಳಿ ಮಾಡಬಲ್ಲದು ಎಂದು ಯಾರೂ ಸಹ ಊಹಿಸಿರಲಿಲ್ಲ. ಕರಾಚಿ ಬಂದರು ಛಿದ್ರಗೊಂಡಿದ್ದರಿಂದ ಪಾಕಿಸ್ತಾನವು ಬೆಚ್ಚಿಬಿದ್ದಿದೆ.

ಆಪರೇಷನ್ ಸಿಂಧೂರ್ ಗೆ ಪಾಕ್ ನ ಟಿವಿ ನಿರೂಪಕಿ ಕಣೀರು?

Operation Sindhoor

ಪೆಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ವೈಮಾನಿಕ ದಾಳಿಯಿಂದ ಪಾಕಿಸ್ತಾನ ೯ ಉಗ್ರ ಅಡಗುತಾಣ ನೆಲಸಮಗೊಂಡಿದೆ. ಸದ್ಯ ಇಂಟರ್ನೆಟ್ ನಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೊವೊಂದರಲ್ಲಿ, ಪಾಕಿಸ್ತಾನಿ ಟಿವಿ ಚಾನೆಲ್ ನ ಸುದ್ದಿ ನಿರೂಪಕಿ ಎಂದು ಹೇಳಲಾದ ಮಹಿಳೆಯೊಬ್ಬರು ಸುದ್ದಿ ನೇರ ಪ್ರಸಾರದ ಸಮಯದಲ್ಲಿ ದುಃಖಿಸುತ್ತಿರುವುದು ಕಂಡುಬಂದಿದೆ. ವೀಡಿಯೊದಲ್ಲಿ, ‘ಆಪರೇಷನ್ ಸಿಂಧೂರ್’ ನ ಭಾಗವಾಗಿರುವ ಭಾರತೀಯ ವೈಮಾನಿಕ ದಾಳಿಯ ನಂತರ ಜೀವಹಾನಿ ಸಂಭವಿಸಿದ್ದಕ್ಕಾಗಿ ಉಸಿರುಗಟ್ಟಿದ ಧ್ವನಿಯೊಂದಿಗೆ, ದಾಳಿಯಿಂದ ಪ್ರಭಾವಿತರಾದ ಮುಗ್ಧ ಆತ್ಮಗಳಿಗೆ ಅಲ್ಲಾಹನಿಂದ ಶಕ್ತಿ ಮತ್ತು ಕರುಣೆಗಾಗಿ ಅವರು ಮನವಿ ಮಾಡುತ್ತಾ ಕಣ್ಣೀರು ಹಾಕುತ್ತಾ ದುಃಖಿಸುತ್ತಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯಾಸತ್ಯತೆ ಕೂಡಿದೆ ಎಂದು ಸ್ಪಷ್ಟವಿಲ್ಲ. ಅಳುತ್ತಿರುವ ಟಿವಿ ನಿರೂಪಕಿ ಮಹಿಳೆ ಸುದ್ದಿ ವಾಹಿನಿಗೆ ಸಂಬಂಧಿಸಿದ್ದಾಳೆ ಅಥವಾ ಇಲ್ವಾ ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ವರದಿಗಳಿಲ್ಲ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ 26 ನಾಗರಿಕರನ್ನು ಕೊಂದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ನಡೆಸಲಾದ ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತವು ಇತ್ತೀಚೆಗೆ ನಡೆಸಿದ ಮಿಲಿಟರಿ ಕ್ರಮಕ್ಕೆ ಪ್ರತಿಕ್ರಿಯೆಯಾಗಿ ಈ ಭಾವನಾತ್ಮಕ ಪ್ರಕೋಪವನ್ನು ವ್ಯಾಪಕವಾಗಿ ಅರ್ಥೈಸಲಾಗುತ್ತಿದೆ. ಮೋದಿ ಹೋಗಿ ಹೇಳು ಎಂದು ಭಯೋತ್ಪಾದಕರು ಹೇಳಿದ್ದರೆನ್ನಲಾದ ಮಾತಿಗೆ ಮೋದಿ ಸರಿಯಾಗಿ ಉತ್ತರ ನೀಡಿದ್ದಾರೆ ಎಂದು ಭಾರತೀಯರು ಸಂತಸ ಪಟ್ಟಿದ್ದಾರೆ.

ಸೇನೆಯ ಆಧುನೀಕರಣಕ್ಕೆ ನಿಧಿ ಸಂಗ್ರಹ ಕುರಿತು ತಪ್ಪು ವಾಟ್ಸಾಪ್ ಸಂದೇಶ ವೈರಲ್: ಕೇಂದ್ರ ಸರಕಾರ ಖಡಕ್ ಎಚ್ಚರಿಕೆ

Viral Whatsapp Message

Viral Whatsapp Message: ಪೆಹಲ್ಗಾಮ್ ಘಟನೆಯ ಬಳಿಕ ದೇಶದಲ್ಲಿ ಒಂದು ತಪ್ಪು ಸಂದೇಶವೊಂದು ವೈರಲ್ ಆಗುತ್ತಿದೆ. ಇದರ ಬಗ್ಗೆ ಕೇಂದ್ರ ಸರಕಾರ ಎಚ್ಚರಿಕೆ ಸಂದೇಶ ರವಾನಿಸಿದ್ದು, ಯಾರು ಸಹ ಇದನ್ನು ಪರಿಗಣಿಸಬಾರದು ಎಂದು ತಿಳಿಸಿದೆ. ಭಾರತೀಯ ಸೇನೆಯ ಆಧುನೀಕರಣಕ್ಕಾಗಿ ನಿಧಿ ಸಂಗ್ರಹಕ್ಕಾಗಿ ಸರ್ಕಾರ ಬ್ಯಾಂಕ್ ಖಾತೆಯನ್ನು ತೆರೆಯಲಾಗಿದೆ ಎಂದು ಹೇಳುವ ತಪ್ಪು ಸಂದೇಶವು ವಾಟ್ಸಾಪ್ನಲ್ಲಿ ಇತ್ತೀಚೆಗೆ ಹರಿದಾಡುತ್ತಿದೆ ಎಂದು ರಕ್ಷಣಾ ಸಚಿವಾಲಯ ಭಾನುವಾರ ಎಚ್ಚರಿಸಿದೆ. 

ರಕ್ಷಣಾ ಸಚಿವಾಲಯ ತನ್ನ ಸಂದೇಶದಲ್ಲಿ ”ಇಂತಹ ಯಾವುದೇ ಸಂದೇಶಗಳು ಸರಕಾರದಿಂದ ರವಾನೆಯಾಗಿಲ್ಲ ಮತ್ತು ಇದು ಮೋಸಗಾರರು ರಚಿಸಿದ ಮೋಸದ ಜಾಲ ಆಗಿರಬಹುದು. ಇದಕ್ಕೆ ಯಾರೂ ಸಹ ಬಲಿಯಾಗಬೇಡಿ ಎಂದು ತಿಳಿಸಿದೆ. ಅಕ್ಷಯ ಕುಮಾರ್ ಅವರ ಹೆಸರನ್ನು ಪ್ರಧಾನ ಪ್ರವರ್ತಕ ಎಂದು ಬಿಂಬಿಸಿ ಈ ಸಂದೇಶ ರವಾನೆಯಾಗಿರುವುದರ ಕುರಿತು ಹೇಳಲಾಗಿದೆ. 

ಯಾವುದೇ ರೀತಿಯ ಸಕ್ರಿಯ ಯುದ್ಧ ಕಾರ್ಯಾಚರಣೆಯ ಸಮಯದಲ್ಲಿ ಅಥವಾ ರಕ್ಷಣಾ ಕಾರ್ಯದ ಸಮಯದಲ್ಲಿ ಮೃತಪಟ್ಟ ಅಥವಾ ಅಂಗವಿಕಲರಾದ ಸೈನಿಕರಿಗಾಗಿ ಸರ್ಕಾರ ಹಲವಾರು ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

”ಫೋನಿನಲ್ಲಿ ಮಾತನಾಡಲು ಇಂದು ಮಗನೇ ಬದುಕುಳಿದಿಲ್ಲ.” ಸುಹಾಸ್ ಶೆಟ್ಟಿ ಅಮ್ಮನ ಅಳು

Suhas Shetty Murder

ನಿನ್ನೆ ಬಜ್ಪೆಯಲ್ಲಿ ಕಿಡಿಗೇಡಿಗಳಿಂದ ಬರ್ಬರವಾಗಿ ಹತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ತಾಯಿಗೆ ಆತನ ಸಾವಿನ ಸುದ್ದಿ ತಿಳಿಸಿರಲಿಲ್ಲ. ಅಸ್ವಸ್ಥರಾಗಿದ್ದ ಸುಹಾಸ್ ನ ತಾಯಿಗೆ ಇಂದು ಮಗನ ಸಾವಿನ ಸುದ್ಧಿ ತಿಳಿದು ಇನ್ನಷ್ಟು ಆರೋಗ್ಯದಲ್ಲಿ ಏರುಪೇರಾಗಿದ್ದು ಮಗನನ್ನು ಕಳೆದುಕೊಂಡ ತಾಯಿಯ ನೋವು ಊಹಿಸಲು ಸಾಧ್ಯವಿಲ್ಲ. ಕೆಲಸದ ನಿಮಿತ್ತ ದೂರ ಇರುತ್ತಿದ್ದ ಸುಹಾಸ್ ನೊಂದಿಗೆ ದಿನಾಲೂ ಅಮ್ಮ ಫೋನ್ ನಲ್ಲಿ ಮಾತನಾಡುತ್ತ ಯೋಗ ಕ್ಷೇಮ ವಿಚಾರಿಸುತ್ತಿದ್ದರು.  ಆದರೆ ಸುಹಾಸ್ ಶೆಟ್ಟಿ ಕೊಲೆಯಾಗುವ ದಿನ ತನ್ನ ತಾಯಿಗೆ ಎಂದಿನಂತೆ ಕರೆ ಮಾಡಿದ್ದರೂ ಸಹ ತಾಯಿ ಸುಲೋಚನಾ ಅನಿವಾರ್ಯ ಕಾರಣದಿಂದ ಕರೆ ಸ್ವೀಕರಿಸಲಿಲ್ಲ. ಇದನ್ನು ಈಗ ಸುಲಚನಾ ಅವರು ನೆನೆದು ಕಡೇ ದಿನ ಮಗನ ಜೊತೆ ಮಾತನಾಡಲಿಲ್ಲವಲ್ಲ ಎಂದು ಕೊರಗುತ್ತಿದ್ದಾರೆ. 

Suhas Shetty Mother

“ನಿತ್ಯವೂ ಫೋನ್ ಮೂಲಕ ಮಗನ ಜೊತೆ ಮಾತನಾಡುತ್ತಿದ್ದೆ. ಆದರೆ ನಿನ್ನೆ ಸಂಬಂಧಿಕರ ಮದುವೆ ಇದ್ದ ಕಾರಣ ಸುಹಾಸ್ ಶೆಟ್ಟಿ ಫೋನ್ ಮಾಡಿದರೂ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಆದರೆ ಸಂಜೆ ಫೋನ್ ಮಾಡಿದಾಗ ಸ್ವಿಚ್ ಆಫ್ ಆಗಿತ್ತು”. ಎಂದು ಅಮ್ಮ ನೋವನ್ನು ಹೇಳಿಕೊಂಡರು. ಬೆಳಗ್ಗೆಯಿಂದ ಸಂಜೆವರೆಗೆ ಮದುವೆ ಕಾರ್ಯಕ್ರಮದಲ್ಲಿದ್ದ ಕಾರಣ ಸುಹಾಸ್ ಶೆಟ್ಟಿಗೆ ಮರಳಿ ಫೋನ್ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಮದುವೆ ಕಾರ್ಯಕ್ರಮ ಮುಗಿಸಿ ಫೋನ್ ಮಾಡಿದಾಗ ಸುಹಾಸ್ ಶೆಟ್ಟಿ ಫೋನ್ ಸ್ವಿಚ್ ಆಫ್ ಆಗಿತ್ತು. ಅಷ್ಟೊತ್ತಿಗಾಗಲೇ ಸುಹಾಸ್ ಶೆಟ್ಟಿಯನ್ನು ಹತ್ಯೆ ಮಾಡಲಾಗಿತ್ತು ಎಂದು ತಾಯಿ ಸುಲೋಚನಾ ಕಣ್ಣೀರಿಟ್ಟಿದ್ದಾರೆ.

ಸುಹಾಸ್ ನನ್ನ ಕೊಲೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು. ತಾಯಿಯ ನೋವು ಯಾರಿಗೂ ಅರ್ಥವಾಗಲ್ಲ. ಹಿಂದುತ್ವವನ್ನೇ ಉಸಿರಾಗಿಸಿದ್ದ ನನ್ನ ಮಗ ಇಂದು ನಮ್ಮನ್ನು ಬಿಟ್ಟು ಅಗಲಿದ್ದಾನೆ ಎಂದು ಸುಹಾಸ್ ಶೆಟ್ಟಿ ತಾಯಿ ಸುಲೋಚನಾ ಹೇಳಿದ್ದಾರೆ. ಸುಹಾಸ್ ಶೆಟ್ಟಿ ಮನೆಯಲ್ಲಿ ಕುಟುಂಬದವರ ಮತ್ತು ಆಪ್ತ ಬಳಗದವರ ಆಕ್ರಂದನ ಮುಗಿಲು ಮುಟ್ಟಿದೆ. ಪೊಲೀಸ್ ಇಲಾಖೆ ಆದಷ್ಟು ಬೇಗ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಲು ತನಿಖೆ ಚುರುಕುಗೊಳಿಸಬೇಕು ಮತ್ತು ಕೊಲೆಗಡುಕರು ಮರಣದಂಡನೆ ಶಿಕ್ಷೆಯಾಗಬೇಕು ಎಂಬುದು ಸಮಾಜದ ಆಶಯ.   

Pahalgam ಘಟನೆಗೆ ಪ್ರತಿಕಾರ ತೀರಿಸುವ ಪಣ ತೊಟ್ಟ ಮೋದಿ. ಸರಕಾರದ ಮುಂದಿನ ನಡೆ ರೋಚಕ

Pahalgam Attack

Pahalgam Attack: ನಿನ್ನೆ ಜಮ್ಮು ಮತ್ತು ಕಾಶ್ಮೀರದ Pahalgam ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಇಡೀ ದೇಶವೇ ಮರುಗುತ್ತಿದೆ. ಪ್ರತೀಕಾರಕ್ಕೆ ಕಾಯುತ್ತಿದೆ. ಕರ್ನಾಟಕದ ಇಬ್ಬರು ಸೇರಿ ಒಟ್ಟು 26 ಪ್ರವಾಸಿಗರನ್ನು ಹತ್ಯೆ ಮಾಡಿ ಕ್ರೂರತೆ ಮೆರೆದ ಭಯೋತ್ಪಾದಕರ ಈ ಕೃತ್ಯವನ್ನು ದೇಶ ಎಂದೂ ಮರೆಯಲು ಸಾಧ್ಯವಿಲ್ಲ. ಹಿಂದೂ ಎಂದು ಹುಡುಕಿ ನಡೆದ ಈ ಹತ್ಯೆಯನ್ನು ದೇಶದ ಪ್ರತಿಯೊಂದು ಪಕ್ಷವೂ ಪಕ್ಷ ಬೇಧ ಮರೆತು ಖಂಡಿಸಿವೆ ಮತ್ತು ಕಠಿಣ ಶಿಕ್ಷೆಗೆ ಆಗ್ರಹಿಸಿ ದೇಶದ ಆಡಳಿತ ಸರಕಾರವೂ ಏನೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಸಂಪೂರ್ಣ ಬೆಂಬಲ ಸೂಚಿಸುವುದಾಗಿ ತಿಳಿಸಿದೆ. 

ಘಟನೆ ನಡೆದ 24 ಗಂಟೆಯೊಳಗೆ ನರೇಂದ್ರ ಮೋದಿ ಸರಕಾರ ಕೆಲವೊಂದು ಕಠಿಣ ನಿರ್ಧಾರಗಳನ್ನು ತುರ್ತು ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಅವುಗಳೆಂದರೆ, 

  • ಭಾರತದಲ್ಲಿರುವ ಪ್ರತಿಯೊಬ್ಬನೂ 48 ಗಂಟೆಯೊಳಗೆ ಭಾರತವನ್ನು ತೊರೆಯಬೇಕು. 
  • ಭಾರತದಲ್ಲಿರುವ ಪಾಕ್ ರಾಜತಾಂತ್ರಿಕ ಪ್ರಜೆಗಳು ಸಹಿತ ಭಾರತವನ್ನು ಅತೀ ಶೀಘ್ರದಲ್ಲಿ ತೊರೆಯಬೇಕು. 
  • ಸುಮಾರು 60 ವರ್ಷಗಳ ಹಿಂದೆ ನಡೆದ ಸಿಂಧೂ ನದಿ ಒಪ್ಪಂದವನ್ನು ತತಕ್ಷಣದಿಂದ ಜರಿ ಬರುವಂತೆ ಸ್ಥಗಿತಗೊಳಿಸಲಾಯಿತು. 
  • ಅಟ್ಟಾರಿ ಗಡಿ ತಕ್ಷಣದಿಂದಲೇ ಬಂದ್ 
  • ಪಾಕ್ ನ ಯಾವುದೇ ಪ್ರಜೆಗಳಿಗೆ ಇನ್ನು ಮುಂದೆ ಭಾರತದ ವೀಸಾ ಇರುವುದಿಲ್ಲ. 
  • ಪಾಕ್ ನಲ್ಲಿರುವ ರಾಜತಾಂತ್ರಿಕ ಪ್ರಜೆಗಳು ಭಾರತಕ್ಕೆ ಮರಳಬೇಕು 
Pahalgam Attack

Pahalgam ಘಟನೆಯನ್ನು ಪ್ರಧಾನಿ ಮೋದಿ ಮತ್ತು ಅವರ ತಂಡ ಬಹಳ ಗಂಭೀರವಾಗಿ ಪರಿಗಣಿಸಿದ್ದು, ಯಾವುದೇ ಕಾರಣಕ್ಕೂ ಪ್ರತೀಕಾರ ತೀರಿಸದೆ ಬಿಡುವುದಿಲ್ಲ ಎಂದು ಪಣ ತೊಟ್ಟಿದ್ದಾರೆ. ಇಡೀ ದೇಶದ ಜನತೆಯ ಆಶಯವೂ ಅದೇ ಆಗಿದೆ. 2016 ಮತ್ತು 2019 ರಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತ ತಕ್ಕ ಉತ್ತರವನ್ನು ಸರ್ಜಿಕಲ್ ದಾಳಿ ಮತ್ತು ಬಾಲಕೋಟ್ ವಾಯು ದಾಳಿ ಮೂಲಕ ನೀಡಿ ಭಯೋತ್ಪಾದಕರ ಹೆಡೆಮುರಿ ಕಟ್ಟಿ ಹಗೆ ಸಾಧಿಸುವಲ್ಲಿ ಸಫಲವಾಗಿತ್ತು. ಆದರೆ ಈ ಸಲದ ಉತ್ತರ ಮಾತ್ರ ಅದಕ್ಕಿಂತ ಕಠಿಣ ಮತ್ತು ಘೋರವಾಗಿರಬೇಕು ಎಂದು ಸಮಸ್ತ ಭಾರತೀಯರು ಬಯಸುತ್ತಿದ್ದಾರೆ ಮತ್ತು ಕಾಯುತ್ತಿದ್ದಾರೆ. ಪಾಕಿಸ್ತಾನ ಕೃಪಾಪೋಷಿತಾ ಭಯೋತ್ಪಾದಕರ ಈ ಕೃತ್ಯದಿಂದಾಗಿ ಈಗಾಗಲೇ ಪಾಕಿಸ್ತಾನಕ್ಕೆ ತಡೆಯಲಾರದ ಜಟ್ಕಾ 24 ಗಂಟೆಯೊಳಗಡೆ ಭಾರತ ಸರಕಾರ ನೀಡಿದೆ. 

ಈ ಭಯೋತ್ಪಾದಕ ದಾಳಿ ಪ್ರತೀಕಾರ ತೀರಿಸುವ ಕುರಿತು ಪ್ರಧಾನಿ ಮೋದಿಯವರು ದೇಶದ ಜನತೆಗೆ ಭರವಸೆ ನೀಡಿದ ಭಾಷಣದ ಸಾರಾಂಶ ಹೀಗಿದೆ.

  • ಈ ಭಯೋತ್ಪಾದಕ ದಾಳಿ ಪ್ರತೀಕಾರ ತೀರಿಸುವ ಕುರಿತು ಪ್ರಧಾನಿ ಮೋದಿಯವರು ಬಿಹಾರದ ಚುನಾವಣಾ ರಾಲಿಯಿಂದ ದೇಶದ ಜನತೆಗೆ ಭರವಸೆ ನೀಡಿದ ಭಾಷಣದ ಸಾರಾಂಶ ಹೀಗಿದೆ.
  • ಆತಂಕವಾದಿಗಳು ಮುಗ್ಧ ಭಾರತೀಯ ಪ್ರವಾಸಿಗರನ್ನು ಬಹಳ ನಿರ್ದಯವಾಗಿ ಕೊಂದಿದ್ದಾರೆ. 
  • ಸಮಸ್ತ ಭಾರತೀಯರು ಈ ಸಂತ್ರಸ್ತ ಕುಟುಂಬದ ಜೊತೆ ಇದ್ದಾರೆ. 
  • ಈ ದಾಳಿಯಲ್ಲಿ ಗಾಯಗೊಂಡವರ ಚಿಕಿತ್ಸೆ ನಡೆಯಿತ್ತಿದ್ದು, ಇವರ ಚೇತರಿಕೆಗೆ ಸರಕಾರ ಸಂಪೂರ್ಣ ಸಹಕಾರ ನೀಡುತ್ತಿದೆ. 
  • ಈ ದಾಳಿ ಕೇವಲ ನಿರ್ದೋಷಿ ಪ್ರವಾಸಿಗರ ಮೇಲೆ ಮಾತ್ರ ಅಲ್ಲ ಅದು ಭಾರತದ ಆತ್ಮಕ್ಕೆ ಮಾಡಿದ ದಾಳಿ ಆಗಿದೆ. 
  • ದಾಳಿ ಮಾಡಿದ ಭಯೋತ್ಪಾದಕರಿಗೆ ಮತ್ತು ಈ ದಾಳಿಯ ಹಿಂದಿರುವ ಸಂಚುಕೋರರಿಗೆ ಅವರ ಕಲ್ಪನೆಗಿಂತಲೂ ಮೀರಿದ ಶಿಕ್ಷೆ ಸಿಗಲಿದೆ ಎಂದು ಬಹಳ ಸ್ಪಷ್ಟ ಶಬ್ದಗಳಲ್ಲಿ ಹೇಳಲು ಇಚ್ಛಿಸುತ್ತೇನೆ. 
  • ಇನ್ನು ಭಯೋತ್ಪಾದಕರ ಅಳಿದುಳಿದ ಜಾಗವು ಸಹ ಮಣ್ಣಲ್ಲಿ ಮಣ್ಣು ಮಾಡುವ ಸಮಯ ಬಂದಿದೆ. 
  • 140 ಕೋಟಿ ಭಾರತೀಯರ ಇಚ್ಛಾ ಶಕ್ತಿಯು ಇನ್ನು ಅಂತಂಕವಾದಿಗಳ ಸೊಂಟ ಮುರಿಯಲಿದೆ.

ಭಯೋತ್ಪಾದಕರಿಗೆ ಸರಿಯಾದ ಶಿಕ್ಷೆ ಸಿಗಲಿ ಭಾರತದಿಂದ ಭಯೋತ್ಪಾದನೆ ಮತ್ತು  ಭಯೋತ್ಪಾದನೆಗೆ ಸಹಕಾರ ನೀಡುತ್ತಿರುವ ದೇಶದ್ರೋಹಿಗಳ ಸರ್ವನಾಶವಾಗಾಳಿಯೂ ಎಂದು ಎಲ್ಲರ ಆಶಯ.

ತುಳುನಾಡಿನಾದ್ಯಂತ ಸದ್ದು ಮಾಡುತ್ತಿದೆ ಧರ್ಮಚಾವಡಿ ಟೀಸರ್

Dharmachavadi Tulu Movie Teaser

Dharmachavadi Tulu Movie Teaser: ಜುಲೈ 11ಕ್ಕೆ ಧರ್ಮಚಾವಡಿ ತುಳು ಸಿನಿಮಾ Dharmachavadi Tulu Movie Teaser ನಿಮ್ಮ ಮುಂದೆ ಬರಲಿದೆ. ಇತ್ತೀಚೆಗೆ ಮಂಗಳೂರಿನ ಭಾರತ್ ಸಿನೆಮಾಸ್ ನಲ್ಲಿ ಇತ್ತೀಚೆಗೆ ತುಳು ಚಿತ್ರರಂಗದಲ್ಲಿ ಬಹಳಷ್ಟು ನಿರೀಕ್ಷೆ ನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾ ಧರ್ಮಚಾವಡಿಯ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಸದ್ಯಕ್ಕೆ MRT ಯೌಟ್ಯೂಬ್ ಚಾನೆಲ್ ನಲ್ಲಿ ಧರ್ಮಚಾವಡಿ ಚಿತ್ರದ ಟೀಸರ್ ಲಭ್ಯವಿದ್ದು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ. ಕರಾವಳಿಯ ದೈವಾರಾಧನೆಯ ತಿರುಳನ್ನು ಇಟ್ಟುಕೊಂಡು ಇಚ್ತ್ತೀಚೆಗೆ ತುಳು ಚಿತ್ರರಂಗದಲ್ಲಿ ಸಡ್ಡು ಮಾಡಿದ್ದ ಧರ್ಮದೈವ ಸಿನಿಮಾದ ಯಶಸ್ವಿ ಯುವ ನಿರ್ದೇಶಕರಾದ ನಿತಿನ್ ರೈ ಕುಕ್ಕುವಳ್ಳಿ ಯವರು ಧರ್ಮಚಾವಡಿ ಚಿತ್ರಕ್ಕೂ ಕಥೆ ಮತ್ತು ನಿರ್ದೇಶನ ಮಾಡಿದ್ದಾರೆ. 

ಕನ್ನಡ ಚಿತ್ರರಂಗ ಹಿಂದಿ ಚಿತ್ರರಂಗ ಸಹ ನಮ್ಮ ತುಳುನಾಡಿನ ತುಳು ಚಿತ್ರರಂಗದ ಕಡೆ ತಿರುಗಿ  ನೋಡುವಂತೆ ಇತ್ತೀಚಿಗಿನ ತುಳು ಸಿನಿಮಾಗಳು ಮಾಡುತ್ತಿರುವುದು ಬಹಳ ಹೆಮ್ಮೆಯ ವಿಚಾರ. ಬಹಳ ಸಮಯಗಳ ನಂತರ ತುಳು ಚಿತ್ರರಂಗದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ದೈವಾರಾಧನೆಯ ವಿಷಯ ಇಟ್ಟುಕೊಂಡು ಇನ್ನಷ್ಟು ಸಿನಿಮಾಗಳು ಚಿತ್ರ ಪ್ರೇಮಿಗಳಿಗೆ ಥೀಯೇಟರ್ ಗಳಲ್ಲಿ ನೋಡಲಿಕ್ಕೆ ಸಿಗಲಿದೆ. ನಿರ್ದೇಶಕರು ಹೇಳುವಂತೆ ಧರ್ಮಚಾವಡಿ ಒಂದು ವಿಶೇಷ ಕಥಾ ಹಂದರವನ್ನು ಹೊಂದಿರುವ ಚಿತ್ರವಾಗಿದ್ದು, ಸಿನಿಮಾ ಪ್ರೇಕ್ಷಕರನ್ನು ಖಂಡಿತವಾಗಿ ಮೋಸ ಹೋಗಲು ಬಿಡುವುದಿಲ್ಲ. 

Dharmachavadi Tulu Movie Teaser

ಧರ್ಮಚಾವಡಿ ಚಿತ್ರವನ್ನು ನಡುಬೈಲು ಜಗದೀಶ್ ಅಮೀನ್ ಮತ್ತು ರವಿ ಸ್ನೇಹಿತ್ ನಿರ್ಮಾಣ ಮಾಡುತ್ತಿದ್ದು, ಕೃಷ್ಣವಾಣಿ ಪಿಚ್ಚರ್ಸ್ ಅಡಿಯಲ್ಲಿ ಚಿತ್ರ ಮೂಡಿಬರಲಿದೆ. ಅರುಣ್ ರೈ ಪುತ್ತೂರು ರವರು ಛಾಯಾಗ್ರಹಣ ಮಾಡಿದ್ದು, ರಜಾಕ್ ಪುತ್ತೂರು ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಪ್ರಸಾದ್ ಶೆಟ್ಟಿ ಸಂಗೀತ ಒದಗಿಸಿದ್ದಾರೆ ಮತ್ತು ಶ್ರೀನಾಥ್ ಪವಾರ್ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. Dharmachavadi Tulu Movie Teaser. ಕೀರ್ತನ್ ಶೆಟ್ಟಿ ಸುಳ್ಯ ಮತ್ತು ಸುಮಂತ್ ಎನ್ ಕನ್ನರ್ಪಾಡಿ ರವರ ಸಹ ನಿರ್ದೇಶನವಿದೆ. ವಸ್ತ್ರ ವಿನ್ಯಾಸಕರಾಗಿ ನಿಶ್ಮಿತಾ ಶೆಟ್ಟಿ ಜವಾಬ್ದಾರಿ ವಹಿಸಿದ್ದಾರೆ. ಈ ಚಿತ್ರಕ್ಕೆ ಕೆ ಕೆ ಪೇಜಾವರ ರವರ ಸಾಹಿತ್ಯ ಇರಲಿದ್ದು ತುಳು ಸಂಗೀತ ಪ್ರೇಮಿಗಳನ್ನು ಇನ್ನಷ್ಟು ರಂಜಿಸಲಿದೆ. 

ಈ ಚಿತ್ರದಲ್ಲಿ ತುಳು ರಂಗಭೂಮಿ ಮತ್ತು ಚಿತ್ರರಂಗದ ಹಿರಿಯ ಕಲಾವಿದರಾದ ರಮೇಶ್ ರೈ ಕುಕ್ಕುವಳ್ಳಿ, ಚೇತನ್ ರೈ ಮಾಣಿ, ದೀಪಕ್ ರೈ ಪಾಣಾಜೆ, ಸುಂದರ ರೈ ಮಂದಾರ, ಕನ್ನಡ ಚಿತ್ರರಂಗದ ಸುರೇಶ ರೈ ಸಹ ನಟಿಸಿದ್ದಾರೆ. ಉಳಿದಂತೆ ನೇಹಾ, ಶರತ್ ಆಳ್ವಾ, ರೂಪ ಡಿ ಶೆಟ್ಟಿ, ಬಾಬಾಪ್ರಸಾದ್, ರಕ್ಷಣ್ ಮಾಡೂರು, ರವಿ ಸ್ನೇಹಿತ್, ಪ್ರಕಾಶ್ ಶೆಟ್ಟಿ, ಮನೀಶ್ ಶೆಟ್ಟಿ, ರಂಜನ್ ಬೋಳೂರು, ಧನ್ಯ ಪೂಜಾರಿ, ನಿಶ್ಮಿತಾ, ನವ್ಯ ಕೊಟ್ಟಾರಿ, ಸರಿತಾ ಜಗದೀಶ್, ರವಿಚಂದ್ರ ರೈ ಮುಂಡೂರು, ಪ್ರಮೀತ್ ರಾಜ್ ಕಟ್ಟತ್ತಾರು, ದೀಕ್ಷಿತ್ ಸೊರಕೆ, ದಯಾನಂದ ರೈ, ನಂದನ್, ಚಿದಾನಂದ ಅದ್ಯಪ್ಪಾಡಿ, ರಾಜೇಶ್ ಕಣ್ಣೂರು, ಗಣರಾಜ್ ಭಂಡಾರಿ, ಗಣೇಶ್, ಓಜಶ್ವಿ, ಕೌಶಿಕ್ ಸುವರ್ಣ, ಅಜಿತ್, ಅಶ್ವಥ್ ಪುತ್ತೂರು, ರಾಧೇಶ್, ರಾಜೇಶ್ ಪ್ರಸಾದ್, ಜೈದೀಪ್ ರೈ ಮುಂತಾದವರು ನಟಿಸಿದ್ದಾರೆ.