ಮೇ 9 ಕ್ಕೆ ಪಿದಾಯಿ ತುಳು ಸಿನಿಮಾ ಬಿಡುಗಡೆ: Pidayi Tulu Cinema

Pidayi Tulu Cinema

Pidayi Tulu Cinema: 2025 ತುಳು ಸಿನಿಮಾಗಳಿಗೆ ಪರ್ವ ಕಾಲ. ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಿದ್ಧಗೊಂಡಿದೆ ಮತ್ತು ಹೆಚ್ಚಿನ ಸಿನಿಮಾಗಳು ದಿನಾಂಕವನ್ನು ಸಹ ಘೋಷಣೆ ಮಾಡಿಕೊಂಡಿದೆ. ಇತ್ತೀಚೆಗೆ ಧರ್ಮಚಾವಡಿ ತನ್ನ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿಕೊಂಡಿದ್ದು, ಈಗ ನಮ್ಮ ಕನಸು ಬ್ಯಾನರಿನಲ್ಲಿ ಕೆ. ಸುರೇಶ್ ಅವರು ನಿರ್ಮಿಸಿದ, ರಮೇಶ್ ಶೆಟ್ಟಿಗಾರ್ ಬರೆದಿರುವ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶಿಸಿದ ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ‘ಪಿದಾಯಿ’ Pidayi Tulu Cinema ತುಳು ಚಲನಚಿತ್ರ ಕರಾವಳಿಯಾದ್ಯಂತ ತೆರೆಕಾಣಲು ಮೇ 9ಕ್ಕೆ ದಿನ ನಿಗದಿಮಾಡಿಕೊಂಡಿದೆ. ಇದರ ಬಗ್ಗೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ಸಂತೋಷ್ ಮಾಡ ಅವರು ತಿಳಿಸಿದರು. 

ಬಹುನಿರೀಕ್ಷಿತ ‘ಪಿದಾಯಿ’ ಚಿತ್ರವು ಈಗಾಗಲೇ ಕೊಲ್ಕತ್ತಾ ಸಿಮ್ಲಾ, ಜಾರ್ಖಂಡ್ ಹಾಗೂ ಕ್ಯಾಲಿಫೋರ್ನಿಯಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ಆಯ್ಕೆಯಾಗುವುದರ ಜೊತೆಗೆ, 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಬಾರಿಗೆ ತುಳು ಚಿತ್ರವೊಂದು ಭಾರತೀಯ ಚಲನಚಿತ್ರ ಹಾಗೂ ಕನ್ನಡ ಚಲನಚಿತ್ರ ವಿಭಾಗಗಳಲ್ಲಿ ಸ್ಪರ್ಧೆಗೆ ಆಯ್ಕೆಯಾಗಿದ್ದು, ಎರಡನೇ ಅತ್ಯುತ್ತಮ ಚಿತ್ರ ಎಂದು ಪ್ರಶಸ್ತಿಯನ್ನು ಸಹ ಪಡೆದಿದೆ. 

ವಿಶೇಷವೆಂದರೆ ತುಳುನಾಡಿನ ವಿಶೇಷತೆಯಾದ ಕುಣಿತ ಭಜನೆಯನ್ನು ಮೊದಲ ಬಾರಿಗೆ ತುಳು ಸಿನಿಮಾದಲ್ಲಿ ಪ್ರಯೋಗಿಸಿದ್ದು, ಯೋಗೀಶ್ ಅಡಕಳಕಟ್ಟೆ ಮತ್ತು ಖ್ಯಾತ ಸಿನಿಮಾ ಸಾಹಿತಿ ಶಶಿರಾಜ್ ಕಾವೂರವರು ಈ ಕುಣಿತ ಭಜನೆಗೆ ಸಾಹಿತ್ಯವನ್ನು ಬರೆದಿದ್ದಾರೆ. ಒಂದು ಸಾಹಿತ್ಯಕ್ಕೆ ಸಂದೀಪ್ ಬಲ್ಲಾಳ್ ಸಂಗೀತ ನೀಡಿದರೆ ಇನ್ನೊಂದು ಕುಣಿತ ಭಜನೆಗೆ ಶಿನೋಯ್ ಜೋಸೆಫ್ ಸಂಗೀತ ನೀಡಿದ್ದಾರೆ.

ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಮಹಾಮಾಯಿ ಪಾತ್ರಿಯಾಗಿ ಕನ್ನಡದ ಖ್ಯಾತ ನಟ ಶರತ್ ಲೋಹಿತಾಶ್ವ ಅಭಿನಯಿಸಿದ್ದಾರೆ. ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೋಳಾರ್, ರೂಪಶ್ರೀ ವರ್ಕಾಡಿ, ಇಳಾ ವಿಟ್ಲ ದೇವಿ ನಾಯರ್, ಪ್ರೀತೇಶ್, ಅನಿಲ್ ರಾಜ್ ಉಪ್ಪಳ, ರವಿ ವರ್ಕಾಡಿ, ಹಾಗೂ ಬಾಲ ಪ್ರತಿಭೆಗಳಾದ ಮೋನಿಶ್, ತ್ರಿಷ, ಧ್ರುವ, ನಿಹಾ, ಖುಷಿ ಡಿಬಿಸಿ ಶೇಖ‌ರ್, ಅನಿತಾ ಚಂದ್ರಶೇಖರ್ ಮುಂತಾದವರು ಅಭಿನಯಿಸಿದ್ದಾರೆ. ಉಣ್ಣೆ ಮಾಡವೂರ್ ಛಾಯಾಗ್ರಾಹಣ, ಸುರೇಶ್ ಅರಸ್ ಸಂಕಲನ, ರಮೇಶ್ ಶೆಟ್ಟಿಗಾ‌ರ್ ಹಾಗೂ ಡಿ.ಬಿ.ಸಿ ಶೇಖ‌ರ್ ಸಂಭಾಷಣೆ ಬರೆದಿದ್ದಾರೆ. ಅಜಯ್ ನಂಬೂದಿರಿ ಈ ಸಿನಿಮಾಕ್ಕೆ ಸಂಗೀತ ನೀಡಿದ್ದು, ಡಾ| ವಿದ್ಯಾಭೂಷಣ್ ಪ್ರಥಮವಾಗಿ ಚಲನಚಿತ್ರದಲ್ಲಿ ಹಾಡಿದ್ದಾರೆ. ಹಿನ್ನಲೆ ಗಾಯಕರಾದ ಮೇಧ ವಿದ್ಯಾಭೂಷಣ್, ವಿಜೇಶ್ ಗೋಪಾಲ್ ಮುಂತಾದವರು ಕಂಠದಾನ ಮಾಡಿದ್ದಾರೆ. 

ತುಳುನಾಡಿನಾದ್ಯಂತ ಸದ್ದು ಮಾಡುತ್ತಿದೆ ಧರ್ಮಚಾವಡಿ ಟೀಸರ್

Dharmachavadi Tulu Movie Teaser

Dharmachavadi Tulu Movie Teaser: ಜುಲೈ 11ಕ್ಕೆ ಧರ್ಮಚಾವಡಿ ತುಳು ಸಿನಿಮಾ Dharmachavadi Tulu Movie Teaser ನಿಮ್ಮ ಮುಂದೆ ಬರಲಿದೆ. ಇತ್ತೀಚೆಗೆ ಮಂಗಳೂರಿನ ಭಾರತ್ ಸಿನೆಮಾಸ್ ನಲ್ಲಿ ಇತ್ತೀಚೆಗೆ ತುಳು ಚಿತ್ರರಂಗದಲ್ಲಿ ಬಹಳಷ್ಟು ನಿರೀಕ್ಷೆ ನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾ ಧರ್ಮಚಾವಡಿಯ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಸದ್ಯಕ್ಕೆ MRT ಯೌಟ್ಯೂಬ್ ಚಾನೆಲ್ ನಲ್ಲಿ ಧರ್ಮಚಾವಡಿ ಚಿತ್ರದ ಟೀಸರ್ ಲಭ್ಯವಿದ್ದು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ. ಕರಾವಳಿಯ ದೈವಾರಾಧನೆಯ ತಿರುಳನ್ನು ಇಟ್ಟುಕೊಂಡು ಇಚ್ತ್ತೀಚೆಗೆ ತುಳು ಚಿತ್ರರಂಗದಲ್ಲಿ ಸಡ್ಡು ಮಾಡಿದ್ದ ಧರ್ಮದೈವ ಸಿನಿಮಾದ ಯಶಸ್ವಿ ಯುವ ನಿರ್ದೇಶಕರಾದ ನಿತಿನ್ ರೈ ಕುಕ್ಕುವಳ್ಳಿ ಯವರು ಧರ್ಮಚಾವಡಿ ಚಿತ್ರಕ್ಕೂ ಕಥೆ ಮತ್ತು ನಿರ್ದೇಶನ ಮಾಡಿದ್ದಾರೆ. 

ಕನ್ನಡ ಚಿತ್ರರಂಗ ಹಿಂದಿ ಚಿತ್ರರಂಗ ಸಹ ನಮ್ಮ ತುಳುನಾಡಿನ ತುಳು ಚಿತ್ರರಂಗದ ಕಡೆ ತಿರುಗಿ  ನೋಡುವಂತೆ ಇತ್ತೀಚಿಗಿನ ತುಳು ಸಿನಿಮಾಗಳು ಮಾಡುತ್ತಿರುವುದು ಬಹಳ ಹೆಮ್ಮೆಯ ವಿಚಾರ. ಬಹಳ ಸಮಯಗಳ ನಂತರ ತುಳು ಚಿತ್ರರಂಗದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ದೈವಾರಾಧನೆಯ ವಿಷಯ ಇಟ್ಟುಕೊಂಡು ಇನ್ನಷ್ಟು ಸಿನಿಮಾಗಳು ಚಿತ್ರ ಪ್ರೇಮಿಗಳಿಗೆ ಥೀಯೇಟರ್ ಗಳಲ್ಲಿ ನೋಡಲಿಕ್ಕೆ ಸಿಗಲಿದೆ. ನಿರ್ದೇಶಕರು ಹೇಳುವಂತೆ ಧರ್ಮಚಾವಡಿ ಒಂದು ವಿಶೇಷ ಕಥಾ ಹಂದರವನ್ನು ಹೊಂದಿರುವ ಚಿತ್ರವಾಗಿದ್ದು, ಸಿನಿಮಾ ಪ್ರೇಕ್ಷಕರನ್ನು ಖಂಡಿತವಾಗಿ ಮೋಸ ಹೋಗಲು ಬಿಡುವುದಿಲ್ಲ. 

Dharmachavadi Tulu Movie Teaser

ಧರ್ಮಚಾವಡಿ ಚಿತ್ರವನ್ನು ನಡುಬೈಲು ಜಗದೀಶ್ ಅಮೀನ್ ಮತ್ತು ರವಿ ಸ್ನೇಹಿತ್ ನಿರ್ಮಾಣ ಮಾಡುತ್ತಿದ್ದು, ಕೃಷ್ಣವಾಣಿ ಪಿಚ್ಚರ್ಸ್ ಅಡಿಯಲ್ಲಿ ಚಿತ್ರ ಮೂಡಿಬರಲಿದೆ. ಅರುಣ್ ರೈ ಪುತ್ತೂರು ರವರು ಛಾಯಾಗ್ರಹಣ ಮಾಡಿದ್ದು, ರಜಾಕ್ ಪುತ್ತೂರು ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಪ್ರಸಾದ್ ಶೆಟ್ಟಿ ಸಂಗೀತ ಒದಗಿಸಿದ್ದಾರೆ ಮತ್ತು ಶ್ರೀನಾಥ್ ಪವಾರ್ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. Dharmachavadi Tulu Movie Teaser. ಕೀರ್ತನ್ ಶೆಟ್ಟಿ ಸುಳ್ಯ ಮತ್ತು ಸುಮಂತ್ ಎನ್ ಕನ್ನರ್ಪಾಡಿ ರವರ ಸಹ ನಿರ್ದೇಶನವಿದೆ. ವಸ್ತ್ರ ವಿನ್ಯಾಸಕರಾಗಿ ನಿಶ್ಮಿತಾ ಶೆಟ್ಟಿ ಜವಾಬ್ದಾರಿ ವಹಿಸಿದ್ದಾರೆ. ಈ ಚಿತ್ರಕ್ಕೆ ಕೆ ಕೆ ಪೇಜಾವರ ರವರ ಸಾಹಿತ್ಯ ಇರಲಿದ್ದು ತುಳು ಸಂಗೀತ ಪ್ರೇಮಿಗಳನ್ನು ಇನ್ನಷ್ಟು ರಂಜಿಸಲಿದೆ. 

ಈ ಚಿತ್ರದಲ್ಲಿ ತುಳು ರಂಗಭೂಮಿ ಮತ್ತು ಚಿತ್ರರಂಗದ ಹಿರಿಯ ಕಲಾವಿದರಾದ ರಮೇಶ್ ರೈ ಕುಕ್ಕುವಳ್ಳಿ, ಚೇತನ್ ರೈ ಮಾಣಿ, ದೀಪಕ್ ರೈ ಪಾಣಾಜೆ, ಸುಂದರ ರೈ ಮಂದಾರ, ಕನ್ನಡ ಚಿತ್ರರಂಗದ ಸುರೇಶ ರೈ ಸಹ ನಟಿಸಿದ್ದಾರೆ. ಉಳಿದಂತೆ ನೇಹಾ, ಶರತ್ ಆಳ್ವಾ, ರೂಪ ಡಿ ಶೆಟ್ಟಿ, ಬಾಬಾಪ್ರಸಾದ್, ರಕ್ಷಣ್ ಮಾಡೂರು, ರವಿ ಸ್ನೇಹಿತ್, ಪ್ರಕಾಶ್ ಶೆಟ್ಟಿ, ಮನೀಶ್ ಶೆಟ್ಟಿ, ರಂಜನ್ ಬೋಳೂರು, ಧನ್ಯ ಪೂಜಾರಿ, ನಿಶ್ಮಿತಾ, ನವ್ಯ ಕೊಟ್ಟಾರಿ, ಸರಿತಾ ಜಗದೀಶ್, ರವಿಚಂದ್ರ ರೈ ಮುಂಡೂರು, ಪ್ರಮೀತ್ ರಾಜ್ ಕಟ್ಟತ್ತಾರು, ದೀಕ್ಷಿತ್ ಸೊರಕೆ, ದಯಾನಂದ ರೈ, ನಂದನ್, ಚಿದಾನಂದ ಅದ್ಯಪ್ಪಾಡಿ, ರಾಜೇಶ್ ಕಣ್ಣೂರು, ಗಣರಾಜ್ ಭಂಡಾರಿ, ಗಣೇಶ್, ಓಜಶ್ವಿ, ಕೌಶಿಕ್ ಸುವರ್ಣ, ಅಜಿತ್, ಅಶ್ವಥ್ ಪುತ್ತೂರು, ರಾಧೇಶ್, ರಾಜೇಶ್ ಪ್ರಸಾದ್, ಜೈದೀಪ್ ರೈ ಮುಂತಾದವರು ನಟಿಸಿದ್ದಾರೆ.