ಸೇನೆಯ ಆಧುನೀಕರಣಕ್ಕೆ ನಿಧಿ ಸಂಗ್ರಹ ಕುರಿತು ತಪ್ಪು ವಾಟ್ಸಾಪ್ ಸಂದೇಶ ವೈರಲ್: ಕೇಂದ್ರ ಸರಕಾರ ಖಡಕ್ ಎಚ್ಚರಿಕೆ

Viral Whatsapp Message

Viral Whatsapp Message: ಪೆಹಲ್ಗಾಮ್ ಘಟನೆಯ ಬಳಿಕ ದೇಶದಲ್ಲಿ ಒಂದು ತಪ್ಪು ಸಂದೇಶವೊಂದು ವೈರಲ್ ಆಗುತ್ತಿದೆ. ಇದರ ಬಗ್ಗೆ ಕೇಂದ್ರ ಸರಕಾರ ಎಚ್ಚರಿಕೆ ಸಂದೇಶ ರವಾನಿಸಿದ್ದು, ಯಾರು ಸಹ ಇದನ್ನು ಪರಿಗಣಿಸಬಾರದು ಎಂದು ತಿಳಿಸಿದೆ. ಭಾರತೀಯ ಸೇನೆಯ ಆಧುನೀಕರಣಕ್ಕಾಗಿ ನಿಧಿ ಸಂಗ್ರಹಕ್ಕಾಗಿ ಸರ್ಕಾರ ಬ್ಯಾಂಕ್ ಖಾತೆಯನ್ನು ತೆರೆಯಲಾಗಿದೆ ಎಂದು ಹೇಳುವ ತಪ್ಪು ಸಂದೇಶವು ವಾಟ್ಸಾಪ್ನಲ್ಲಿ ಇತ್ತೀಚೆಗೆ ಹರಿದಾಡುತ್ತಿದೆ ಎಂದು ರಕ್ಷಣಾ ಸಚಿವಾಲಯ ಭಾನುವಾರ ಎಚ್ಚರಿಸಿದೆ. 

ರಕ್ಷಣಾ ಸಚಿವಾಲಯ ತನ್ನ ಸಂದೇಶದಲ್ಲಿ ”ಇಂತಹ ಯಾವುದೇ ಸಂದೇಶಗಳು ಸರಕಾರದಿಂದ ರವಾನೆಯಾಗಿಲ್ಲ ಮತ್ತು ಇದು ಮೋಸಗಾರರು ರಚಿಸಿದ ಮೋಸದ ಜಾಲ ಆಗಿರಬಹುದು. ಇದಕ್ಕೆ ಯಾರೂ ಸಹ ಬಲಿಯಾಗಬೇಡಿ ಎಂದು ತಿಳಿಸಿದೆ. ಅಕ್ಷಯ ಕುಮಾರ್ ಅವರ ಹೆಸರನ್ನು ಪ್ರಧಾನ ಪ್ರವರ್ತಕ ಎಂದು ಬಿಂಬಿಸಿ ಈ ಸಂದೇಶ ರವಾನೆಯಾಗಿರುವುದರ ಕುರಿತು ಹೇಳಲಾಗಿದೆ. 

ಯಾವುದೇ ರೀತಿಯ ಸಕ್ರಿಯ ಯುದ್ಧ ಕಾರ್ಯಾಚರಣೆಯ ಸಮಯದಲ್ಲಿ ಅಥವಾ ರಕ್ಷಣಾ ಕಾರ್ಯದ ಸಮಯದಲ್ಲಿ ಮೃತಪಟ್ಟ ಅಥವಾ ಅಂಗವಿಕಲರಾದ ಸೈನಿಕರಿಗಾಗಿ ಸರ್ಕಾರ ಹಲವಾರು ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.