ಮೇ 2 ರಂದು ರಾಜ್ಯಾದ್ಯಂತ The Karnataka School Examination and Assessment Board (KSEAB) ಈ ಸಾಲಿನ SSLC ಫಲಿತಾಂಶವನ್ನು ತನ್ನ ವೆಬ್ಸೈಟ್ ನಲ್ಲಿ ಪ್ರಕಟಿಸಿದೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದರೆ ಉಡುಪಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಈ ಸಲನೂ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ.
2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕೆಯ್ಯೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ (KPS Keyyur)ಗೆ 90.24% ಫಲಿತಾಂಶ ಬಂದಿದ್ದು, ಕೆಲವು ವಿದ್ಯಾರ್ಥಿಗಳು ಈಗಾಗಲೇ ಮರು ಮೌಲ್ಯಮಾಪನಕ್ಕೆ ಹಾಕಿರುವುದರಿಂದ ಇನ್ನಷ್ಟು ಹೆಚ್ಚಿನ ಫಲಿತಾಂಶ ಬರುವ ನಿರೀಕ್ಷೆಯಿದೆ. ಕೆಪಿಎಸ್ ಕೆಯ್ಯೂರಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾದ ಒಟ್ಟು 82 ವಿದ್ಯಾರ್ಥಿಗಳ ಪೈಕಿ 74 ವಿದ್ಯಾರ್ಥಿಗಳು ಉತ್ತೀರ್ಣರಾಗಿ 90.24 ಶೇಕಡಾ ಫಲಿತಾಂಶವನ್ನು ದಾಖಲಾಗಿದೆ. ಇವರಲ್ಲಿ 10 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ಶಿಕ್ಷಕರು ಮತ್ತು ಹೆತ್ತವರು ಹೆಮ್ಮೆ ಪಡುವಂತಾಗಿದೆ. ಅಲ್ಲದೆ 38 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು 21 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಪಡೆದುಕೊಂಡಿದ್ದಾರೆ. 7 ಜನ ವಿದ್ಯಾರ್ಥಿಗಳಿಗೆ ಎ ಪ್ಲಸ್ ಗ್ರೇಡ್ ಲಭಿಸಿದೆ.

ಅಸ್ಮಿತಾ. ಎಸ್ 609 ಅಂಕಗಳನ್ನು ಪಡೆದು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಹಾಗೂ ಸ್ಮಿತಾ ಯು 604 ಅಂಕ ಪಡೆದು ಶಾಲೆಗೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಉಳಿದಂತೆ ರಾಯಲ್ ಡಿಸೋಜಾ -593 ಅಂಕ, ಮುಹಮ್ಮದ್ ಅನ್ಸಾರ್ ಕೆ.ಎ – 590 ಅಂಕ, ಫಾತಿಮತ್ ಶಮ್ನ – 576 ಅಂಕ, ತೇಜಸ್ – 571 ಅಂಕ, ಫಾತಿಮತ್ ಸಿಫಾ – 571 ಅಂಕ, ಯಕ್ಷಿತಾ – 558 ಅಂಕ, ಅಫ್ರೀನ – 546 ಅಂಕ, ಸಾನ್ವಿ ಡಿ.ಪಿ – 541 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಗೆ ಅರ್ಹರಾಗಿದ್ದಾರೆ, ಎಂದು ಶಾಲೆಯ ಉಪ ಪ್ರಾಂಶುಪಾಲರಾದ ವಿನೋದ್ ಕುಮಾರ್ ಕೆಎಸ್ ತಿಳಿಸಿದ್ದಾರೆ.
609 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಅಸ್ಮಿತ ಎಸ್ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಶುಂಠಿಮಜಲಿನ ನಿವಾಸಿ ಅವಿನಾಶ್ ಪೂಜಾರಿ ಮತ್ತು ಸುಜಾತ ದಂಪತಿಯ ಪುತ್ರಿ. ಕಲಿಕೆ ಹಾಗೂ ಶಾಲೆಯ ಇನ್ನಿತರ ಚಟುವಟಿಕೆಯಲ್ಲೂ ಮುಂದಿರುವ ಅಸ್ಮಿತಾ ಭವಿಷ್ಯದಲ್ಲಿ IAS ಅಧಿಕಾರಿ ಆಗಬೇಕೆಂಬ ಕನಸನ್ನು ಇಟ್ಟುಕೊಂಡಿದ್ದಾಳೆ. ಮಗಳ ಸಾಧನೆಯನ್ನು ಕಂಡು ಹೆತ್ತವರು ಸಹ ಹೆಮ್ಮೆ ಪಡುತ್ತಿದ್ದಾರೆ.
604 ಅಂಕಗಳನ್ನು ಪಡೆದು ಶಾಲೆಗೆ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿನಿ ಸ್ಮಿತಾ ಯು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಅಂಕತಡ್ಕದ ನಿವಾಸಿ ಉಮೇಶ ಎಪಿ ಹಾಗೂ ಚಿತ್ರಾವತಿ ಕೆ ಎಮ್ ದಂಪತಿಯ ಮಗಳು. ಆಕೆಯ ನಿರೀಕ್ಷೆಯಂತೆ ಉತ್ತಮ ಅಂಕ ಬಂದಿರುವುದು ಖುಷಿ ತಂದಿದೆ ಎಂದು ಮಾದ್ಯಮಕ್ಕೆ ತಿಳಿಸಿದ್ದಾಳೆ. ಮುಂದೆ ಉನ್ನತ ಶಿಕ್ಷಣ ಪಡೆದು ಉನ್ನತ ಉದ್ಯೋಗ ಗಳಿಸುವ ಅಸೆ ಇವಳದ್ದಾಗಿದೆ. ತನ್ನ ಶೈಕ್ಷಣಿಕ ಸಾಧನೆಗೆ ಕಾರಣರಾದ ಹೆತ್ತವರು ಹಾಗೂ ಶಿಕ್ಷಕರ ಪ್ರೋತ್ಸಾಹವನ್ನು ಅವಳು ಕೃತಜ್ಞತೆಯಿಂದ ಸ್ಮರಿಸುತ್ತಾಳೆ.