Dharmachavadi Tulu Movie Teaser: ಜುಲೈ 11ಕ್ಕೆ ಧರ್ಮಚಾವಡಿ ತುಳು ಸಿನಿಮಾ Dharmachavadi Tulu Movie Teaser ನಿಮ್ಮ ಮುಂದೆ ಬರಲಿದೆ. ಇತ್ತೀಚೆಗೆ ಮಂಗಳೂರಿನ ಭಾರತ್ ಸಿನೆಮಾಸ್ ನಲ್ಲಿ ಇತ್ತೀಚೆಗೆ ತುಳು ಚಿತ್ರರಂಗದಲ್ಲಿ ಬಹಳಷ್ಟು ನಿರೀಕ್ಷೆ ನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾ ಧರ್ಮಚಾವಡಿಯ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಸದ್ಯಕ್ಕೆ MRT ಯೌಟ್ಯೂಬ್ ಚಾನೆಲ್ ನಲ್ಲಿ ಧರ್ಮಚಾವಡಿ ಚಿತ್ರದ ಟೀಸರ್ ಲಭ್ಯವಿದ್ದು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ. ಕರಾವಳಿಯ ದೈವಾರಾಧನೆಯ ತಿರುಳನ್ನು ಇಟ್ಟುಕೊಂಡು ಇಚ್ತ್ತೀಚೆಗೆ ತುಳು ಚಿತ್ರರಂಗದಲ್ಲಿ ಸಡ್ಡು ಮಾಡಿದ್ದ ಧರ್ಮದೈವ ಸಿನಿಮಾದ ಯಶಸ್ವಿ ಯುವ ನಿರ್ದೇಶಕರಾದ ನಿತಿನ್ ರೈ ಕುಕ್ಕುವಳ್ಳಿ ಯವರು ಧರ್ಮಚಾವಡಿ ಚಿತ್ರಕ್ಕೂ ಕಥೆ ಮತ್ತು ನಿರ್ದೇಶನ ಮಾಡಿದ್ದಾರೆ.
ಕನ್ನಡ ಚಿತ್ರರಂಗ ಹಿಂದಿ ಚಿತ್ರರಂಗ ಸಹ ನಮ್ಮ ತುಳುನಾಡಿನ ತುಳು ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಇತ್ತೀಚಿಗಿನ ತುಳು ಸಿನಿಮಾಗಳು ಮಾಡುತ್ತಿರುವುದು ಬಹಳ ಹೆಮ್ಮೆಯ ವಿಚಾರ. ಬಹಳ ಸಮಯಗಳ ನಂತರ ತುಳು ಚಿತ್ರರಂಗದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ದೈವಾರಾಧನೆಯ ವಿಷಯ ಇಟ್ಟುಕೊಂಡು ಇನ್ನಷ್ಟು ಸಿನಿಮಾಗಳು ಚಿತ್ರ ಪ್ರೇಮಿಗಳಿಗೆ ಥೀಯೇಟರ್ ಗಳಲ್ಲಿ ನೋಡಲಿಕ್ಕೆ ಸಿಗಲಿದೆ. ನಿರ್ದೇಶಕರು ಹೇಳುವಂತೆ ಧರ್ಮಚಾವಡಿ ಒಂದು ವಿಶೇಷ ಕಥಾ ಹಂದರವನ್ನು ಹೊಂದಿರುವ ಚಿತ್ರವಾಗಿದ್ದು, ಸಿನಿಮಾ ಪ್ರೇಕ್ಷಕರನ್ನು ಖಂಡಿತವಾಗಿ ಮೋಸ ಹೋಗಲು ಬಿಡುವುದಿಲ್ಲ.

ಧರ್ಮಚಾವಡಿ ಚಿತ್ರವನ್ನು ನಡುಬೈಲು ಜಗದೀಶ್ ಅಮೀನ್ ಮತ್ತು ರವಿ ಸ್ನೇಹಿತ್ ನಿರ್ಮಾಣ ಮಾಡುತ್ತಿದ್ದು, ಕೃಷ್ಣವಾಣಿ ಪಿಚ್ಚರ್ಸ್ ಅಡಿಯಲ್ಲಿ ಚಿತ್ರ ಮೂಡಿಬರಲಿದೆ. ಅರುಣ್ ರೈ ಪುತ್ತೂರು ರವರು ಛಾಯಾಗ್ರಹಣ ಮಾಡಿದ್ದು, ರಜಾಕ್ ಪುತ್ತೂರು ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಪ್ರಸಾದ್ ಶೆಟ್ಟಿ ಸಂಗೀತ ಒದಗಿಸಿದ್ದಾರೆ ಮತ್ತು ಶ್ರೀನಾಥ್ ಪವಾರ್ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. Dharmachavadi Tulu Movie Teaser. ಕೀರ್ತನ್ ಶೆಟ್ಟಿ ಸುಳ್ಯ ಮತ್ತು ಸುಮಂತ್ ಎನ್ ಕನ್ನರ್ಪಾಡಿ ರವರ ಸಹ ನಿರ್ದೇಶನವಿದೆ. ವಸ್ತ್ರ ವಿನ್ಯಾಸಕರಾಗಿ ನಿಶ್ಮಿತಾ ಶೆಟ್ಟಿ ಜವಾಬ್ದಾರಿ ವಹಿಸಿದ್ದಾರೆ. ಈ ಚಿತ್ರಕ್ಕೆ ಕೆ ಕೆ ಪೇಜಾವರ ರವರ ಸಾಹಿತ್ಯ ಇರಲಿದ್ದು ತುಳು ಸಂಗೀತ ಪ್ರೇಮಿಗಳನ್ನು ಇನ್ನಷ್ಟು ರಂಜಿಸಲಿದೆ.
ಈ ಚಿತ್ರದಲ್ಲಿ ತುಳು ರಂಗಭೂಮಿ ಮತ್ತು ಚಿತ್ರರಂಗದ ಹಿರಿಯ ಕಲಾವಿದರಾದ ರಮೇಶ್ ರೈ ಕುಕ್ಕುವಳ್ಳಿ, ಚೇತನ್ ರೈ ಮಾಣಿ, ದೀಪಕ್ ರೈ ಪಾಣಾಜೆ, ಸುಂದರ ರೈ ಮಂದಾರ, ಕನ್ನಡ ಚಿತ್ರರಂಗದ ಸುರೇಶ ರೈ ಸಹ ನಟಿಸಿದ್ದಾರೆ. ಉಳಿದಂತೆ ನೇಹಾ, ಶರತ್ ಆಳ್ವಾ, ರೂಪ ಡಿ ಶೆಟ್ಟಿ, ಬಾಬಾಪ್ರಸಾದ್, ರಕ್ಷಣ್ ಮಾಡೂರು, ರವಿ ಸ್ನೇಹಿತ್, ಪ್ರಕಾಶ್ ಶೆಟ್ಟಿ, ಮನೀಶ್ ಶೆಟ್ಟಿ, ರಂಜನ್ ಬೋಳೂರು, ಧನ್ಯ ಪೂಜಾರಿ, ನಿಶ್ಮಿತಾ, ನವ್ಯ ಕೊಟ್ಟಾರಿ, ಸರಿತಾ ಜಗದೀಶ್, ರವಿಚಂದ್ರ ರೈ ಮುಂಡೂರು, ಪ್ರಮೀತ್ ರಾಜ್ ಕಟ್ಟತ್ತಾರು, ದೀಕ್ಷಿತ್ ಸೊರಕೆ, ದಯಾನಂದ ರೈ, ನಂದನ್, ಚಿದಾನಂದ ಅದ್ಯಪ್ಪಾಡಿ, ರಾಜೇಶ್ ಕಣ್ಣೂರು, ಗಣರಾಜ್ ಭಂಡಾರಿ, ಗಣೇಶ್, ಓಜಶ್ವಿ, ಕೌಶಿಕ್ ಸುವರ್ಣ, ಅಜಿತ್, ಅಶ್ವಥ್ ಪುತ್ತೂರು, ರಾಧೇಶ್, ರಾಜೇಶ್ ಪ್ರಸಾದ್, ಜೈದೀಪ್ ರೈ ಮುಂತಾದವರು ನಟಿಸಿದ್ದಾರೆ.