Pahalgam Attack: ನಿನ್ನೆ ಜಮ್ಮು ಮತ್ತು ಕಾಶ್ಮೀರದ Pahalgam ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಇಡೀ ದೇಶವೇ ಮರುಗುತ್ತಿದೆ. ಪ್ರತೀಕಾರಕ್ಕೆ ಕಾಯುತ್ತಿದೆ. ಕರ್ನಾಟಕದ ಇಬ್ಬರು ಸೇರಿ ಒಟ್ಟು 26 ಪ್ರವಾಸಿಗರನ್ನು ಹತ್ಯೆ ಮಾಡಿ ಕ್ರೂರತೆ ಮೆರೆದ ಭಯೋತ್ಪಾದಕರ ಈ ಕೃತ್ಯವನ್ನು ದೇಶ ಎಂದೂ ಮರೆಯಲು ಸಾಧ್ಯವಿಲ್ಲ. ಹಿಂದೂ ಎಂದು ಹುಡುಕಿ ನಡೆದ ಈ ಹತ್ಯೆಯನ್ನು ದೇಶದ ಪ್ರತಿಯೊಂದು ಪಕ್ಷವೂ ಪಕ್ಷ ಬೇಧ ಮರೆತು ಖಂಡಿಸಿವೆ ಮತ್ತು ಕಠಿಣ ಶಿಕ್ಷೆಗೆ ಆಗ್ರಹಿಸಿ ದೇಶದ ಆಡಳಿತ ಸರಕಾರವೂ ಏನೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಸಂಪೂರ್ಣ ಬೆಂಬಲ ಸೂಚಿಸುವುದಾಗಿ ತಿಳಿಸಿದೆ.
ಘಟನೆ ನಡೆದ 24 ಗಂಟೆಯೊಳಗೆ ನರೇಂದ್ರ ಮೋದಿ ಸರಕಾರ ಕೆಲವೊಂದು ಕಠಿಣ ನಿರ್ಧಾರಗಳನ್ನು ತುರ್ತು ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಅವುಗಳೆಂದರೆ,
- ಭಾರತದಲ್ಲಿರುವ ಪ್ರತಿಯೊಬ್ಬನೂ 48 ಗಂಟೆಯೊಳಗೆ ಭಾರತವನ್ನು ತೊರೆಯಬೇಕು.
- ಭಾರತದಲ್ಲಿರುವ ಪಾಕ್ ರಾಜತಾಂತ್ರಿಕ ಪ್ರಜೆಗಳು ಸಹಿತ ಭಾರತವನ್ನು ಅತೀ ಶೀಘ್ರದಲ್ಲಿ ತೊರೆಯಬೇಕು.
- ಸುಮಾರು 60 ವರ್ಷಗಳ ಹಿಂದೆ ನಡೆದ ಸಿಂಧೂ ನದಿ ಒಪ್ಪಂದವನ್ನು ತತಕ್ಷಣದಿಂದ ಜರಿ ಬರುವಂತೆ ಸ್ಥಗಿತಗೊಳಿಸಲಾಯಿತು.
- ಅಟ್ಟಾರಿ ಗಡಿ ತಕ್ಷಣದಿಂದಲೇ ಬಂದ್
- ಪಾಕ್ ನ ಯಾವುದೇ ಪ್ರಜೆಗಳಿಗೆ ಇನ್ನು ಮುಂದೆ ಭಾರತದ ವೀಸಾ ಇರುವುದಿಲ್ಲ.
- ಪಾಕ್ ನಲ್ಲಿರುವ ರಾಜತಾಂತ್ರಿಕ ಪ್ರಜೆಗಳು ಭಾರತಕ್ಕೆ ಮರಳಬೇಕು

Pahalgam ಘಟನೆಯನ್ನು ಪ್ರಧಾನಿ ಮೋದಿ ಮತ್ತು ಅವರ ತಂಡ ಬಹಳ ಗಂಭೀರವಾಗಿ ಪರಿಗಣಿಸಿದ್ದು, ಯಾವುದೇ ಕಾರಣಕ್ಕೂ ಪ್ರತೀಕಾರ ತೀರಿಸದೆ ಬಿಡುವುದಿಲ್ಲ ಎಂದು ಪಣ ತೊಟ್ಟಿದ್ದಾರೆ. ಇಡೀ ದೇಶದ ಜನತೆಯ ಆಶಯವೂ ಅದೇ ಆಗಿದೆ. 2016 ಮತ್ತು 2019 ರಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತ ತಕ್ಕ ಉತ್ತರವನ್ನು ಸರ್ಜಿಕಲ್ ದಾಳಿ ಮತ್ತು ಬಾಲಕೋಟ್ ವಾಯು ದಾಳಿ ಮೂಲಕ ನೀಡಿ ಭಯೋತ್ಪಾದಕರ ಹೆಡೆಮುರಿ ಕಟ್ಟಿ ಹಗೆ ಸಾಧಿಸುವಲ್ಲಿ ಸಫಲವಾಗಿತ್ತು. ಆದರೆ ಈ ಸಲದ ಉತ್ತರ ಮಾತ್ರ ಅದಕ್ಕಿಂತ ಕಠಿಣ ಮತ್ತು ಘೋರವಾಗಿರಬೇಕು ಎಂದು ಸಮಸ್ತ ಭಾರತೀಯರು ಬಯಸುತ್ತಿದ್ದಾರೆ ಮತ್ತು ಕಾಯುತ್ತಿದ್ದಾರೆ. ಪಾಕಿಸ್ತಾನ ಕೃಪಾಪೋಷಿತಾ ಭಯೋತ್ಪಾದಕರ ಈ ಕೃತ್ಯದಿಂದಾಗಿ ಈಗಾಗಲೇ ಪಾಕಿಸ್ತಾನಕ್ಕೆ ತಡೆಯಲಾರದ ಜಟ್ಕಾ 24 ಗಂಟೆಯೊಳಗಡೆ ಭಾರತ ಸರಕಾರ ನೀಡಿದೆ.
ಈ ಭಯೋತ್ಪಾದಕ ದಾಳಿ ಪ್ರತೀಕಾರ ತೀರಿಸುವ ಕುರಿತು ಪ್ರಧಾನಿ ಮೋದಿಯವರು ದೇಶದ ಜನತೆಗೆ ಭರವಸೆ ನೀಡಿದ ಭಾಷಣದ ಸಾರಾಂಶ ಹೀಗಿದೆ.
- ಈ ಭಯೋತ್ಪಾದಕ ದಾಳಿ ಪ್ರತೀಕಾರ ತೀರಿಸುವ ಕುರಿತು ಪ್ರಧಾನಿ ಮೋದಿಯವರು ಬಿಹಾರದ ಚುನಾವಣಾ ರಾಲಿಯಿಂದ ದೇಶದ ಜನತೆಗೆ ಭರವಸೆ ನೀಡಿದ ಭಾಷಣದ ಸಾರಾಂಶ ಹೀಗಿದೆ.
- ಆತಂಕವಾದಿಗಳು ಮುಗ್ಧ ಭಾರತೀಯ ಪ್ರವಾಸಿಗರನ್ನು ಬಹಳ ನಿರ್ದಯವಾಗಿ ಕೊಂದಿದ್ದಾರೆ.
- ಸಮಸ್ತ ಭಾರತೀಯರು ಈ ಸಂತ್ರಸ್ತ ಕುಟುಂಬದ ಜೊತೆ ಇದ್ದಾರೆ.
- ಈ ದಾಳಿಯಲ್ಲಿ ಗಾಯಗೊಂಡವರ ಚಿಕಿತ್ಸೆ ನಡೆಯಿತ್ತಿದ್ದು, ಇವರ ಚೇತರಿಕೆಗೆ ಸರಕಾರ ಸಂಪೂರ್ಣ ಸಹಕಾರ ನೀಡುತ್ತಿದೆ.
- ಈ ದಾಳಿ ಕೇವಲ ನಿರ್ದೋಷಿ ಪ್ರವಾಸಿಗರ ಮೇಲೆ ಮಾತ್ರ ಅಲ್ಲ ಅದು ಭಾರತದ ಆತ್ಮಕ್ಕೆ ಮಾಡಿದ ದಾಳಿ ಆಗಿದೆ.
- ದಾಳಿ ಮಾಡಿದ ಭಯೋತ್ಪಾದಕರಿಗೆ ಮತ್ತು ಈ ದಾಳಿಯ ಹಿಂದಿರುವ ಸಂಚುಕೋರರಿಗೆ ಅವರ ಕಲ್ಪನೆಗಿಂತಲೂ ಮೀರಿದ ಶಿಕ್ಷೆ ಸಿಗಲಿದೆ ಎಂದು ಬಹಳ ಸ್ಪಷ್ಟ ಶಬ್ದಗಳಲ್ಲಿ ಹೇಳಲು ಇಚ್ಛಿಸುತ್ತೇನೆ.
- ಇನ್ನು ಭಯೋತ್ಪಾದಕರ ಅಳಿದುಳಿದ ಜಾಗವು ಸಹ ಮಣ್ಣಲ್ಲಿ ಮಣ್ಣು ಮಾಡುವ ಸಮಯ ಬಂದಿದೆ.
- 140 ಕೋಟಿ ಭಾರತೀಯರ ಇಚ್ಛಾ ಶಕ್ತಿಯು ಇನ್ನು ಅಂತಂಕವಾದಿಗಳ ಸೊಂಟ ಮುರಿಯಲಿದೆ.
ಭಯೋತ್ಪಾದಕರಿಗೆ ಸರಿಯಾದ ಶಿಕ್ಷೆ ಸಿಗಲಿ ಭಾರತದಿಂದ ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಸಹಕಾರ ನೀಡುತ್ತಿರುವ ದೇಶದ್ರೋಹಿಗಳ ಸರ್ವನಾಶವಾಗಾಳಿಯೂ ಎಂದು ಎಲ್ಲರ ಆಶಯ.