ಶ್ರೀ ಕ್ಷೇತ್ರ ಕೆಯ್ಯೂರಿನ ಕುರಿತಾದ ಕೆಯ್ಯೂರುದಪ್ಪೆನ ಐಸಿರದ ಐತ ತುಳು ಭಕ್ತಿ ಗೀತೆಯ ವಿಡಿಯೋ ಆಲ್ಬಮ್ ಹಾಡು  ಬಿಡುಗಡೆ

Keyyuru Song

ಪ್ರಮೀತ್ ರಾಜ್ ಕಟ್ಟತ್ತಾರು ರಚಿಸಿದ ಹಾಗೂ ಮನಮೋಹನ ಕಣಿಯಾರು ನಿರ್ಮಾಣದ ಪುತ್ತೂರು ತಾಲೂಕಿನ ಪ್ರಸಿದ್ಧ ಹಾಗೂ ಪುರಾತನ ದೇವಲಯವಾದ ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರೀ ದೇವಸ್ಥಾನ ಶ್ರೀ ಕ್ಷೇತ್ರ ಕೆಯ್ಯೂರಿನ ಕುರಿತಾದ ”ಕೆಯ್ಯೂರುದಪ್ಪೆನ ಐಸಿರದ ಐತ” ಎಂಬ ಮೊತ್ತ ಮೊದಲ ಭಕ್ತಿ ಪ್ರಧಾನ ವಿಡಿಯೋ ಆಲ್ಬಮ್ ಹಾಡು ದಿನಾಂಕ 30.05.2025 ಶುಕ್ರವಾರ ಶ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು.

Keyyuru Song

ಈ ಆಲ್ಬಮ್ ಹಾಡನ್ನು ಶ್ರೀ ಕ್ಷೇತ್ರ ಕೆಯ್ಯೂರಿನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಎಕೆ ಜಯರಾಮ ರೈ ಕೆಯ್ಯೂರು ಇವರು ಬಿಡುಗಡೆಗೊಳಿಸಿದರು ಮತ್ತು ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಹಾಗೂ ಕ್ಷೇತ್ರೇಶರಾದ ಶ್ರೀ ಶಶಿಧರ ರಾವ್ ಬೊಲಿಕ್ಕಳ ಯೌಟ್ಯೂಬ್ ನಲ್ಲಿ ಅಧಿಕೃತವಾಗಿ ವಿಡಿಯೋ ಗೆ ಚಾಲನೆಗೊಳಿಸಿದರು.

ಕೆಯ್ಯೂರುದಪ್ಪೆನ ಐಸಿರದ ಐತ ವಿಡಿಯೋ ಆಲ್ಬಮ್ ಹಾಡಿಗೆ ಪ್ರಮೀತ್ ರಾಜ್ ಕಟ್ಟತ್ತಾರು ಸಾಹಿತ್ಯ ಬರೆದು ನಿರ್ದೇಶನವನ್ನು ಮಾಡುವುದರ ಜೊತೆಗೆ ಅಭಿನಯವನ್ನು ಸಹ ಮಾಡಿದ್ದಾರೆ. ಅಶ್ವಿನ್ ಬಾಬಣ್ಣ ಇವರು ಈ ಭಕ್ತಿಗೀತೆಗೆ ಸಂಗೀತ ನೀಡಿದ್ದು, ಪ್ರವೀಣ್ ಕುಮಾರ್ ಮಂಗಳೂರು ಮತ್ತು ಸವಿತಾ ಅವಿನಾಶ್ ಇವರ ಕಂಠದಲ್ಲಿ ಸುಮಧುರವಾಗಿ ಮೂಡಿ ಬಂದಿದೆ. ತುಳು ಚಿತ್ರರಂಗದ ಹೆಸರಾಂತ ಮತ್ತು ಬಹಳ ಬೇಡಿಕೆಯ ಛಾಯಾಗ್ರಾಹಕ ಅರುಣ್ ರೈ ಪುತ್ತೂರು ಕೆಯ್ಯೂರುದಪ್ಪೆನ ಐಸಿರದ ಐತ ಆಲ್ಬಮ್ ಹಾಡಿಗೆ ಛಾಯಾಗ್ರಹಣ ಮಾಡಿದ್ದಾರೆ. ಸಂಕಲನದಲ್ಲಿ ಕೈಚಳಕ ತೋರಿಸಿ ಸೈ ಎನಿಸಿಕೊಂಡವರು ರೋಷನ್ ಎ.ಎಸ್ ಕಡಬ. ಉಳಿದಂತೆ ತಂಡದಲ್ಲಿ ವಿಶ್ಮಿತಾ ರೈ, ಗಣೇಶ್, ಅನಿಲ್ ರೈ ಸೌಮ್ಯ ಅನಿರುದ್ದ್, ಸತೀಶ್, ಅಶೋಕ್ ಬಾಳಿಲ ಇದ್ದಾರೆ.

Keyyuru Song

ಕೆಯ್ಯೂರುದಪ್ಪೆನ ಐಸಿರದ ಐತ ಬಿಡುಗಡೆ ಸಂಧರ್ಭದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀನಿವಾಸ ರಾವ್, ಸಹ ಅರ್ಚಕರಾದ ಮಧುಸೂಧನ್ ಭಟ್, ಆನಂದ ರೈ ಕೆಯ್ಯೂರು, ಭಾಗ್ಯೇಶ್ ರೈ ಕೆಯ್ಯೂರು, ಗಣೇಶ್ ಭಟ್ ಕೈತಡ್ಕ, ಚಂದ್ರಶೇಖರ ರೈ ಕಜೆ, ವಿಶ್ವನಾಥ್ ಪೂಜಾರಿ ಕೆಂಗುಡೇಲು, ಹೊನ್ನಪ್ಪ ಮೂಲ್ಯ ಕಟ್ಟತ್ತಾರು, ಸುಜಯ ಕೆಯ್ಯೂರು, ಪದ್ಮನಾಭ ಪಲ್ಲತ್ತಡ್ಕ, ಅಶ್ವಥ್ ಭಟ್ ದೇರ್ಲ, ದೇವಪ್ಪ, ಮೋನಪ್ಪ ಅಜಲಾಯ ಕೆಯ್ಯೂರು, ಚಿನ್ನಪ್ಪ ಕೆಯ್ಯೂರು, ಮತ್ತು ಕ್ಷೇತ್ರದ ಭಕ್ತಾದಿಗಣ್ಯರು ಉಪಸ್ಥಿತರಿದ್ದು, ಹಾಡನ್ನು ನೋಡಿ ಹರಸಿದರು.

ಸದ್ಯ ಹಾಡು ಯುಟ್ಯೂಬ್ ನಲ್ಲಿ ಲಭ್ಯವಿದ್ದು Pramith Raj Creations ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ಎಲ್ಲರೂ ಯುಟ್ಯೂಬ್ ನಲ್ಲಿ ಕೆಯ್ಯೂರುದಪ್ಪೆನ ಐಸಿರದ ಐತ ಆಲ್ಬಮ್ ಹಾಡನ್ನು ನೋಡಲು ಅವಕಾಶವಿದೆ. ಈ ಹಾಡಿನಲ್ಲಿ ಕ್ಷೇತ್ರದ ಸಂಪೂರ್ಣ ಚಿತ್ರಣವನ್ನು ಮತ್ತು ಪ್ರಕೃತಿ ಸೌಂದರ್ಯವನ್ನು ಬಹಳ ಸುಂದರವಾಗಿ ಅರುಣ್ ಅವರು ತನ್ನ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿದಿದ್ದು ಪ್ರಮೀತ್ ರಾಜ್ ಅವರ ಸಾಹಿತ್ಯದ ಜೊತೆಗೆ ಪ್ರವೀಣ್ ಹಾಗೂ ಸವಿತಾ ಅವರ ಹಾಡುಗಾರಿಕೆ ಜನರನ್ನು ಮಂತ್ರಮುಗ್ಧರನ್ನಾಗಿಸಿದೆ. ಅಶ್ವಿನ್ ಅವರ ಸಂಗೀತ, ಹಾಡನ್ನು ಪದೇ ಪದೇ ಗುಣುಗುಣಿಸುವ ಹಾಗೆ ಮಾಡಿದೆ. ರೋಷನ್ ಅವರು ಸಂಕಲನದಲ್ಲಿ ಮಾಡಿದ ಕೈಚಳಕ ಯಾವ ಪ್ರೊಫೆಶನಲ್ ಸಿನಿಮಾಗಳಿಗೂ ಕಡಿಮೆ ಇಲ್ಲದಂತೆ ಆಲ್ಬಮ್ ಹಾಡು ಮೂಡಿ ಬಂದಿದೆ.

Leave a Reply

Your email address will not be published. Required fields are marked *