Pahalgam ಘಟನೆಗೆ ಪ್ರತಿಕಾರ ತೀರಿಸುವ ಪಣ ತೊಟ್ಟ ಮೋದಿ. ಸರಕಾರದ ಮುಂದಿನ ನಡೆ ರೋಚಕ

Pahalgam Attack

Pahalgam Attack: ನಿನ್ನೆ ಜಮ್ಮು ಮತ್ತು ಕಾಶ್ಮೀರದ Pahalgam ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಇಡೀ ದೇಶವೇ ಮರುಗುತ್ತಿದೆ. ಪ್ರತೀಕಾರಕ್ಕೆ ಕಾಯುತ್ತಿದೆ. ಕರ್ನಾಟಕದ ಇಬ್ಬರು ಸೇರಿ ಒಟ್ಟು 26 ಪ್ರವಾಸಿಗರನ್ನು ಹತ್ಯೆ ಮಾಡಿ ಕ್ರೂರತೆ ಮೆರೆದ ಭಯೋತ್ಪಾದಕರ ಈ ಕೃತ್ಯವನ್ನು ದೇಶ ಎಂದೂ ಮರೆಯಲು ಸಾಧ್ಯವಿಲ್ಲ. ಹಿಂದೂ ಎಂದು ಹುಡುಕಿ ನಡೆದ ಈ ಹತ್ಯೆಯನ್ನು ದೇಶದ ಪ್ರತಿಯೊಂದು ಪಕ್ಷವೂ ಪಕ್ಷ ಬೇಧ ಮರೆತು ಖಂಡಿಸಿವೆ ಮತ್ತು ಕಠಿಣ ಶಿಕ್ಷೆಗೆ ಆಗ್ರಹಿಸಿ ದೇಶದ ಆಡಳಿತ ಸರಕಾರವೂ ಏನೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಸಂಪೂರ್ಣ ಬೆಂಬಲ ಸೂಚಿಸುವುದಾಗಿ ತಿಳಿಸಿದೆ. 

ಘಟನೆ ನಡೆದ 24 ಗಂಟೆಯೊಳಗೆ ನರೇಂದ್ರ ಮೋದಿ ಸರಕಾರ ಕೆಲವೊಂದು ಕಠಿಣ ನಿರ್ಧಾರಗಳನ್ನು ತುರ್ತು ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಅವುಗಳೆಂದರೆ, 

  • ಭಾರತದಲ್ಲಿರುವ ಪ್ರತಿಯೊಬ್ಬನೂ 48 ಗಂಟೆಯೊಳಗೆ ಭಾರತವನ್ನು ತೊರೆಯಬೇಕು. 
  • ಭಾರತದಲ್ಲಿರುವ ಪಾಕ್ ರಾಜತಾಂತ್ರಿಕ ಪ್ರಜೆಗಳು ಸಹಿತ ಭಾರತವನ್ನು ಅತೀ ಶೀಘ್ರದಲ್ಲಿ ತೊರೆಯಬೇಕು. 
  • ಸುಮಾರು 60 ವರ್ಷಗಳ ಹಿಂದೆ ನಡೆದ ಸಿಂಧೂ ನದಿ ಒಪ್ಪಂದವನ್ನು ತತಕ್ಷಣದಿಂದ ಜರಿ ಬರುವಂತೆ ಸ್ಥಗಿತಗೊಳಿಸಲಾಯಿತು. 
  • ಅಟ್ಟಾರಿ ಗಡಿ ತಕ್ಷಣದಿಂದಲೇ ಬಂದ್ 
  • ಪಾಕ್ ನ ಯಾವುದೇ ಪ್ರಜೆಗಳಿಗೆ ಇನ್ನು ಮುಂದೆ ಭಾರತದ ವೀಸಾ ಇರುವುದಿಲ್ಲ. 
  • ಪಾಕ್ ನಲ್ಲಿರುವ ರಾಜತಾಂತ್ರಿಕ ಪ್ರಜೆಗಳು ಭಾರತಕ್ಕೆ ಮರಳಬೇಕು 
Pahalgam Attack

Pahalgam ಘಟನೆಯನ್ನು ಪ್ರಧಾನಿ ಮೋದಿ ಮತ್ತು ಅವರ ತಂಡ ಬಹಳ ಗಂಭೀರವಾಗಿ ಪರಿಗಣಿಸಿದ್ದು, ಯಾವುದೇ ಕಾರಣಕ್ಕೂ ಪ್ರತೀಕಾರ ತೀರಿಸದೆ ಬಿಡುವುದಿಲ್ಲ ಎಂದು ಪಣ ತೊಟ್ಟಿದ್ದಾರೆ. ಇಡೀ ದೇಶದ ಜನತೆಯ ಆಶಯವೂ ಅದೇ ಆಗಿದೆ. 2016 ಮತ್ತು 2019 ರಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತ ತಕ್ಕ ಉತ್ತರವನ್ನು ಸರ್ಜಿಕಲ್ ದಾಳಿ ಮತ್ತು ಬಾಲಕೋಟ್ ವಾಯು ದಾಳಿ ಮೂಲಕ ನೀಡಿ ಭಯೋತ್ಪಾದಕರ ಹೆಡೆಮುರಿ ಕಟ್ಟಿ ಹಗೆ ಸಾಧಿಸುವಲ್ಲಿ ಸಫಲವಾಗಿತ್ತು. ಆದರೆ ಈ ಸಲದ ಉತ್ತರ ಮಾತ್ರ ಅದಕ್ಕಿಂತ ಕಠಿಣ ಮತ್ತು ಘೋರವಾಗಿರಬೇಕು ಎಂದು ಸಮಸ್ತ ಭಾರತೀಯರು ಬಯಸುತ್ತಿದ್ದಾರೆ ಮತ್ತು ಕಾಯುತ್ತಿದ್ದಾರೆ. ಪಾಕಿಸ್ತಾನ ಕೃಪಾಪೋಷಿತಾ ಭಯೋತ್ಪಾದಕರ ಈ ಕೃತ್ಯದಿಂದಾಗಿ ಈಗಾಗಲೇ ಪಾಕಿಸ್ತಾನಕ್ಕೆ ತಡೆಯಲಾರದ ಜಟ್ಕಾ 24 ಗಂಟೆಯೊಳಗಡೆ ಭಾರತ ಸರಕಾರ ನೀಡಿದೆ. 

ಈ ಭಯೋತ್ಪಾದಕ ದಾಳಿ ಪ್ರತೀಕಾರ ತೀರಿಸುವ ಕುರಿತು ಪ್ರಧಾನಿ ಮೋದಿಯವರು ದೇಶದ ಜನತೆಗೆ ಭರವಸೆ ನೀಡಿದ ಭಾಷಣದ ಸಾರಾಂಶ ಹೀಗಿದೆ.

  • ಈ ಭಯೋತ್ಪಾದಕ ದಾಳಿ ಪ್ರತೀಕಾರ ತೀರಿಸುವ ಕುರಿತು ಪ್ರಧಾನಿ ಮೋದಿಯವರು ಬಿಹಾರದ ಚುನಾವಣಾ ರಾಲಿಯಿಂದ ದೇಶದ ಜನತೆಗೆ ಭರವಸೆ ನೀಡಿದ ಭಾಷಣದ ಸಾರಾಂಶ ಹೀಗಿದೆ.
  • ಆತಂಕವಾದಿಗಳು ಮುಗ್ಧ ಭಾರತೀಯ ಪ್ರವಾಸಿಗರನ್ನು ಬಹಳ ನಿರ್ದಯವಾಗಿ ಕೊಂದಿದ್ದಾರೆ. 
  • ಸಮಸ್ತ ಭಾರತೀಯರು ಈ ಸಂತ್ರಸ್ತ ಕುಟುಂಬದ ಜೊತೆ ಇದ್ದಾರೆ. 
  • ಈ ದಾಳಿಯಲ್ಲಿ ಗಾಯಗೊಂಡವರ ಚಿಕಿತ್ಸೆ ನಡೆಯಿತ್ತಿದ್ದು, ಇವರ ಚೇತರಿಕೆಗೆ ಸರಕಾರ ಸಂಪೂರ್ಣ ಸಹಕಾರ ನೀಡುತ್ತಿದೆ. 
  • ಈ ದಾಳಿ ಕೇವಲ ನಿರ್ದೋಷಿ ಪ್ರವಾಸಿಗರ ಮೇಲೆ ಮಾತ್ರ ಅಲ್ಲ ಅದು ಭಾರತದ ಆತ್ಮಕ್ಕೆ ಮಾಡಿದ ದಾಳಿ ಆಗಿದೆ. 
  • ದಾಳಿ ಮಾಡಿದ ಭಯೋತ್ಪಾದಕರಿಗೆ ಮತ್ತು ಈ ದಾಳಿಯ ಹಿಂದಿರುವ ಸಂಚುಕೋರರಿಗೆ ಅವರ ಕಲ್ಪನೆಗಿಂತಲೂ ಮೀರಿದ ಶಿಕ್ಷೆ ಸಿಗಲಿದೆ ಎಂದು ಬಹಳ ಸ್ಪಷ್ಟ ಶಬ್ದಗಳಲ್ಲಿ ಹೇಳಲು ಇಚ್ಛಿಸುತ್ತೇನೆ. 
  • ಇನ್ನು ಭಯೋತ್ಪಾದಕರ ಅಳಿದುಳಿದ ಜಾಗವು ಸಹ ಮಣ್ಣಲ್ಲಿ ಮಣ್ಣು ಮಾಡುವ ಸಮಯ ಬಂದಿದೆ. 
  • 140 ಕೋಟಿ ಭಾರತೀಯರ ಇಚ್ಛಾ ಶಕ್ತಿಯು ಇನ್ನು ಅಂತಂಕವಾದಿಗಳ ಸೊಂಟ ಮುರಿಯಲಿದೆ.

ಭಯೋತ್ಪಾದಕರಿಗೆ ಸರಿಯಾದ ಶಿಕ್ಷೆ ಸಿಗಲಿ ಭಾರತದಿಂದ ಭಯೋತ್ಪಾದನೆ ಮತ್ತು  ಭಯೋತ್ಪಾದನೆಗೆ ಸಹಕಾರ ನೀಡುತ್ತಿರುವ ದೇಶದ್ರೋಹಿಗಳ ಸರ್ವನಾಶವಾಗಾಳಿಯೂ ಎಂದು ಎಲ್ಲರ ಆಶಯ.

ತುಳುನಾಡಿನಾದ್ಯಂತ ಸದ್ದು ಮಾಡುತ್ತಿದೆ ಧರ್ಮಚಾವಡಿ ಟೀಸರ್

Dharmachavadi Tulu Movie Teaser

Dharmachavadi Tulu Movie Teaser: ಜುಲೈ 11ಕ್ಕೆ ಧರ್ಮಚಾವಡಿ ತುಳು ಸಿನಿಮಾ Dharmachavadi Tulu Movie Teaser ನಿಮ್ಮ ಮುಂದೆ ಬರಲಿದೆ. ಇತ್ತೀಚೆಗೆ ಮಂಗಳೂರಿನ ಭಾರತ್ ಸಿನೆಮಾಸ್ ನಲ್ಲಿ ಇತ್ತೀಚೆಗೆ ತುಳು ಚಿತ್ರರಂಗದಲ್ಲಿ ಬಹಳಷ್ಟು ನಿರೀಕ್ಷೆ ನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾ ಧರ್ಮಚಾವಡಿಯ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಸದ್ಯಕ್ಕೆ MRT ಯೌಟ್ಯೂಬ್ ಚಾನೆಲ್ ನಲ್ಲಿ ಧರ್ಮಚಾವಡಿ ಚಿತ್ರದ ಟೀಸರ್ ಲಭ್ಯವಿದ್ದು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ. ಕರಾವಳಿಯ ದೈವಾರಾಧನೆಯ ತಿರುಳನ್ನು ಇಟ್ಟುಕೊಂಡು ಇಚ್ತ್ತೀಚೆಗೆ ತುಳು ಚಿತ್ರರಂಗದಲ್ಲಿ ಸಡ್ಡು ಮಾಡಿದ್ದ ಧರ್ಮದೈವ ಸಿನಿಮಾದ ಯಶಸ್ವಿ ಯುವ ನಿರ್ದೇಶಕರಾದ ನಿತಿನ್ ರೈ ಕುಕ್ಕುವಳ್ಳಿ ಯವರು ಧರ್ಮಚಾವಡಿ ಚಿತ್ರಕ್ಕೂ ಕಥೆ ಮತ್ತು ನಿರ್ದೇಶನ ಮಾಡಿದ್ದಾರೆ. 

ಕನ್ನಡ ಚಿತ್ರರಂಗ ಹಿಂದಿ ಚಿತ್ರರಂಗ ಸಹ ನಮ್ಮ ತುಳುನಾಡಿನ ತುಳು ಚಿತ್ರರಂಗದ ಕಡೆ ತಿರುಗಿ  ನೋಡುವಂತೆ ಇತ್ತೀಚಿಗಿನ ತುಳು ಸಿನಿಮಾಗಳು ಮಾಡುತ್ತಿರುವುದು ಬಹಳ ಹೆಮ್ಮೆಯ ವಿಚಾರ. ಬಹಳ ಸಮಯಗಳ ನಂತರ ತುಳು ಚಿತ್ರರಂಗದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ದೈವಾರಾಧನೆಯ ವಿಷಯ ಇಟ್ಟುಕೊಂಡು ಇನ್ನಷ್ಟು ಸಿನಿಮಾಗಳು ಚಿತ್ರ ಪ್ರೇಮಿಗಳಿಗೆ ಥೀಯೇಟರ್ ಗಳಲ್ಲಿ ನೋಡಲಿಕ್ಕೆ ಸಿಗಲಿದೆ. ನಿರ್ದೇಶಕರು ಹೇಳುವಂತೆ ಧರ್ಮಚಾವಡಿ ಒಂದು ವಿಶೇಷ ಕಥಾ ಹಂದರವನ್ನು ಹೊಂದಿರುವ ಚಿತ್ರವಾಗಿದ್ದು, ಸಿನಿಮಾ ಪ್ರೇಕ್ಷಕರನ್ನು ಖಂಡಿತವಾಗಿ ಮೋಸ ಹೋಗಲು ಬಿಡುವುದಿಲ್ಲ. 

Dharmachavadi Tulu Movie Teaser

ಧರ್ಮಚಾವಡಿ ಚಿತ್ರವನ್ನು ನಡುಬೈಲು ಜಗದೀಶ್ ಅಮೀನ್ ಮತ್ತು ರವಿ ಸ್ನೇಹಿತ್ ನಿರ್ಮಾಣ ಮಾಡುತ್ತಿದ್ದು, ಕೃಷ್ಣವಾಣಿ ಪಿಚ್ಚರ್ಸ್ ಅಡಿಯಲ್ಲಿ ಚಿತ್ರ ಮೂಡಿಬರಲಿದೆ. ಅರುಣ್ ರೈ ಪುತ್ತೂರು ರವರು ಛಾಯಾಗ್ರಹಣ ಮಾಡಿದ್ದು, ರಜಾಕ್ ಪುತ್ತೂರು ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಪ್ರಸಾದ್ ಶೆಟ್ಟಿ ಸಂಗೀತ ಒದಗಿಸಿದ್ದಾರೆ ಮತ್ತು ಶ್ರೀನಾಥ್ ಪವಾರ್ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. Dharmachavadi Tulu Movie Teaser. ಕೀರ್ತನ್ ಶೆಟ್ಟಿ ಸುಳ್ಯ ಮತ್ತು ಸುಮಂತ್ ಎನ್ ಕನ್ನರ್ಪಾಡಿ ರವರ ಸಹ ನಿರ್ದೇಶನವಿದೆ. ವಸ್ತ್ರ ವಿನ್ಯಾಸಕರಾಗಿ ನಿಶ್ಮಿತಾ ಶೆಟ್ಟಿ ಜವಾಬ್ದಾರಿ ವಹಿಸಿದ್ದಾರೆ. ಈ ಚಿತ್ರಕ್ಕೆ ಕೆ ಕೆ ಪೇಜಾವರ ರವರ ಸಾಹಿತ್ಯ ಇರಲಿದ್ದು ತುಳು ಸಂಗೀತ ಪ್ರೇಮಿಗಳನ್ನು ಇನ್ನಷ್ಟು ರಂಜಿಸಲಿದೆ. 

ಈ ಚಿತ್ರದಲ್ಲಿ ತುಳು ರಂಗಭೂಮಿ ಮತ್ತು ಚಿತ್ರರಂಗದ ಹಿರಿಯ ಕಲಾವಿದರಾದ ರಮೇಶ್ ರೈ ಕುಕ್ಕುವಳ್ಳಿ, ಚೇತನ್ ರೈ ಮಾಣಿ, ದೀಪಕ್ ರೈ ಪಾಣಾಜೆ, ಸುಂದರ ರೈ ಮಂದಾರ, ಕನ್ನಡ ಚಿತ್ರರಂಗದ ಸುರೇಶ ರೈ ಸಹ ನಟಿಸಿದ್ದಾರೆ. ಉಳಿದಂತೆ ನೇಹಾ, ಶರತ್ ಆಳ್ವಾ, ರೂಪ ಡಿ ಶೆಟ್ಟಿ, ಬಾಬಾಪ್ರಸಾದ್, ರಕ್ಷಣ್ ಮಾಡೂರು, ರವಿ ಸ್ನೇಹಿತ್, ಪ್ರಕಾಶ್ ಶೆಟ್ಟಿ, ಮನೀಶ್ ಶೆಟ್ಟಿ, ರಂಜನ್ ಬೋಳೂರು, ಧನ್ಯ ಪೂಜಾರಿ, ನಿಶ್ಮಿತಾ, ನವ್ಯ ಕೊಟ್ಟಾರಿ, ಸರಿತಾ ಜಗದೀಶ್, ರವಿಚಂದ್ರ ರೈ ಮುಂಡೂರು, ಪ್ರಮೀತ್ ರಾಜ್ ಕಟ್ಟತ್ತಾರು, ದೀಕ್ಷಿತ್ ಸೊರಕೆ, ದಯಾನಂದ ರೈ, ನಂದನ್, ಚಿದಾನಂದ ಅದ್ಯಪ್ಪಾಡಿ, ರಾಜೇಶ್ ಕಣ್ಣೂರು, ಗಣರಾಜ್ ಭಂಡಾರಿ, ಗಣೇಶ್, ಓಜಶ್ವಿ, ಕೌಶಿಕ್ ಸುವರ್ಣ, ಅಜಿತ್, ಅಶ್ವಥ್ ಪುತ್ತೂರು, ರಾಧೇಶ್, ರಾಜೇಶ್ ಪ್ರಸಾದ್, ಜೈದೀಪ್ ರೈ ಮುಂತಾದವರು ನಟಿಸಿದ್ದಾರೆ.